ವಿಶ್ವಕಪ್ ಕೂಟದ ನೆಚ್ಚಿನ ತಂಡಗಳಲ್ಲಿ ಒಂದಾದ ಭಾರತ ಶನಿವಾರ ತನ್ನ ಮೊದಲ ಅಭ್ಯಾಸ ಪಂದ್ಯವನ್ನಾಡಲಿದೆ. ಇಲ್ಲಿನ ಕೆನ್ನಿಂಗ್ಟನ್ ಓವಲ್‍ನಲ್ಲಿ ನಡೆಯುವ ಮುಖಾಮುಖಿಯಲ್ಲಿ ಕೊಹ್ಲಿ ಪಡೆ ನ್ಯೂಜಿಲ್ಯಾಂಡನ್ನು ಎದುರಿಸಲಿದೆ.
ವಿಶ್ವ ರ‍್ಯಾಂಕಿಂಗ್‍ನಲ್ಲಿ 2ನೇ ಸ್ಥಾನದಲ್ಲಿರುವ ಭಾರತ ಕಳೆದ ಕೆಲವು ತಿಂಗಳಲ್ಲಿ ಸಾಕಷ್ಟು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರೂ ತನ್ನ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಕೊರತೆಯನ್ನು ನೀಗಿಸುವಲ್ಲಿ ವಿಫಲವಾಗಿದೆ.
ಮುಖ್ಯವಾಗಿ 4ನೇ ಕ್ರಮಾಂಕಕ್ಕೆ ಇನ್ನೂ ಸೂಕ್ತ ಆಟಗಾರರೇ ಲಭಿಸಿಲ್ಲ! ಇಲ್ಲಿ ಕ್ರೀಸ್ ಇಳಿದ ಬ್ಯಾಟ್ಸ್ ಮ್ಯಾನ್ ಗಳಲ್ಲಿ ಯಾರೂ ಪರಿಣಾಮ ಬೀರಿಲ್ಲ. ಹೀಗಾಗಿ ಈ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ 4ನೇ ಕ್ರಮಾಂಕದ ಬ್ಯಾಟಿಂಗ್‍ನತ್ತ ಹೆಚ್ಚಿನ ಗಮನ ಹರಿಸುವ ಯೋಜನೆಯಲ್ಲಿದೆ.
ಮಿಡ್ಲ್ ಆರ್ಡರ್ ನ ಪ್ರಮುಖ ಹೆಸರುಗಳೆಂದರೆ ಕೆ.ಎಲ್. ರಾಹುಲ್ ಮತ್ತು ವಿಜಯ್ ಶಂಕರ್ ಅವರ ದು. ಮೂಲತಃ ಓಪನರ್ ಆಗಿರುವ ರಾಹುಲ್ ಪ್ರಚಂಡ ಫಾರ್ಮ್‍ನಲ್ಲಿದ್ದಾರೆ. ವಿಜಯ್ ಶಂಕರ್ ಗೆ ಅನುಭವದ ಕೊರತೆ ಕಾಡುತ್ತಿದ್ದು, ಇಂಥ ದೊಡ್ಡ ಕೂಟದ ಒತ್ತಡವನ್ನೆಲ್ಲ ಹೇಗೆ ನಿಭಾಯಿಸಬಲ್ಲರೆಂಬ ಪ್ರಶ್ನೆಯೂ ಇದೆ.
ಭಾರತ ಬೌಲಿಂಗ್ ವಿಭಾಗ ಹೆಚ್ಚು ವೈವಿಧ್ಯಮಯವಾಗಿದೆ. ಬುಮ್ರಾ ಟ್ರಂಪ್‍ಕಾರ್ಡ್ ಆಗುವುದು ನಿಶ್ಚಿತ. ಶಮಿ, ಭುವನೇಶ್ವರ್ ಅವರಿಗೂ ಇಂಗ್ಲೆಂಡ್ ಪಿಚ್‍ಗಳು ಸೂಟ್ ಆಗುವ ಎಲ್ಲ ಲಕ್ಷಣ ಕಂಡುಬರುತ್ತಿದೆ. ಕುಲದೀಪ್, ಚಾಹಲ್, ಜಡೇಜ ಅವರನ್ನೊನಳಗೊಂಡ ವೆರೈಟಿ ಸ್ಪಿನ್ ವಿಭಾಗವನ್ನು ಭಾರತ ಹೊಂದಿದೆ.