Sunday, January 19, 2025
ಸುದ್ದಿ

ದೇವೇಗೌಡರ ಮೇಲೆ ಗರಂ ಆದ ಮೊಮ್ಮಗ ನಿಖಿಲ್ – ಕಹಳೆ ನ್ಯೂಸ್

ರಾಜ್ಯದ ಹೈವೋಲ್ಟೇಜ್ ಕ್ಷೇತ್ರವಾದ ಮಂಡ್ಯದಲ್ಲಿ ನಿಖಿಲ್ ಕುಮರಸ್ವಾಮಿ ಅವರು ಹೀನಾಯ ಸೋಲುಂಡಿದ್ದು, ಫಲಿತಾಂಶ ದಿನ ಗುರುವಾರ ರಾತ್ರಿ ಮೈಸೂರಿನ ಹೋಟೆಲ್‍ವೊಂದರಲ್ಲಿ ಕುಡಿದು ರಾದ್ಧಾಂತ ಮಾಡಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಣೆಯಾದ ಸಮಯದಲ್ಲಿ, ಎಲ್ಲೂ ಕಾಣಿಸಿಕೊಳ್ಳದ ನಿಖಿಲ್ ಕುಮಾರಸ್ವಾವಿ ರಾತ್ರಿ ಮೈಸೂರಿನ ಹೋಟೆಲ್‍ನಲ್ಲಿ ಠಿಕಾಣಿ ಹೂಡಿದ್ದರು. ಸೋಲಿನ ಬೇಸರದಿಂದ ಜೋರಾಗಿ ಗಲಾಟೆ-ರಂಪಾಟ ಮಾಡಿದ್ದಾರೆ. ತೀವ್ರ ಆಕ್ರೋಶಗೊಂಡಿದ್ದ ನಿಖಿಲ್, ಓರ್ವ ಮಹಿಳೆಯ ವಿರುದ್ಧ ತಾನು ಸೋತಿರುವುದು ದೊಡ್ಡ ಅವಮಾನ. ಮಂಡ್ಯದ ಜನ ನನ್ನ ಕೈ ಹಿಡಿಯಲಿಲ್ಲ. ಸಂಸದನಾಗುವ ಆಸೆ ನೆರವೇರಲಿಲ್ಲ ಎಂದು ಕೂಗಾಡಿದರೆಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕುಡಿದ ಮತ್ತಿನಲ್ಲಿ ತಮ್ಮ ತಾತ ದೇವೇಗೌಡರ ಮೇಲೂ ಸಿಟ್ಟನ್ನು ಹೊರ ಹಾಕಿದ್ದಾರೆ ನಿಖಿಲ್. ನೀವು ನನ್ನನ್ನು ಮಂಡ್ಯದ ಚಕ್ರವ್ಯೂಹದಲ್ಲಿ ಸಿಲುಕಿಸಿಬಿಟ್ಟಿದ್ದೀರಾ. ನಿಮ್ಮನ್ನು ನಂಬಿ ನಾನು ಹಾಳಾಗಿಬಿಟ್ಟೆ. 8 ಶಾಸಕರು ಇಬ್ಬರು ಸಚಿವರಿದ್ದರೂ ನಾನು ಯಾಕೆ ಗೆಲ್ಲೋದಕ್ಕೆ ಆಗಲಿಲ್ಲ. ಹಾಸನದಲ್ಲಿ ಕಾಂಗ್ರೆಸಿಗರ ಮನವೊಲಿಸಲು ರೇವಣ್ಣ ಯಶಸ್ವಿಯಾಗಲಿಲ್ವ.? ಎಂದು ತಮ್ಮ ಮನದೊಳಗಿನ ವೇದನೆಯನ್ನು ಹೊರಚೆಲ್ಲಿದ್ದಾರೆ ಕುಮಾರ ಪುತ್ರ.