Sunday, January 19, 2025
ಸುದ್ದಿ

ಎಲ್ಲರಿಗೂ ಮಾದರಿಯಾಗಲಿ ಉಡುಪಿ ಹೆಲ್ಪ್ ಆ್ಯಪ್ – ಕಹಳೆ ನ್ಯೂಸ್

ಮಳೆಗಾಲದಲ್ಲಿ ಎದುರಾಗುವ ಪ್ರಾಕೃತಿಕ ವಿಕೋಪ ನಿರ್ವಹಣೆ ನಿಟ್ಟಿನಲ್ಲಿ ಅಧಿಕಾರಿ, ಸಿಬ್ಬಂದಿಗಳ ಚುರುಕುಗೊಳಿಸಲು ಸದ್ಯದಲ್ಲೇ ಹೊಸತೊಂದು ಆ್ಯಪ್ ಬರಲಿದೆ.

ಆರಂಭಿಕ ಹಂತದಲ್ಲಿ ಉಡುಪಿ ನಗರಸಭೆಯ 35 ವಾರ್ಡ್‍ಗಳಿಗೆ ಸೀಮಿತವಾಗಿ ಪ್ರಾಯೋಗಿಕವಾಗಿ ಈ ಬಾರಿಯ ಮಳೆಗಾಲದಲ್ಲಿ ಕಾರ್ಯನಿರ್ವಹಿಸುವ ‘ಉಡುಪಿ ಹೆಲ್ಪ್.ಕಾಂ’ಆ್ಯಪ್‍ಗೆ ಚುನಾವಣಾ ಆಯೋಗದ ಯಶಸ್ವಿ ಸಿ ವಿಜಿಲ್ ಆ್ಯಪ್ ಮಾದರಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಳೆಗಾಲದಲ್ಲಿ ವಿದ್ಯುತ್ ಕಂಬ, ಮರಗಳು, ಮನೆ ಹಾಗು ರಸ್ತೆಗಡ್ಡ ಬೀಳುತ್ತಿದ್ದು, ಅಲ್ಲಲ್ಲಿ ನೆರೆ ಸಮಸ್ಯೆಯೂ ತಲೆದೂರುತ್ತಿದೆ. ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಪರಿಹಾರಕ್ಕಾಗಿ ಯಾರಿಗೆ, ಎಲ್ಲಿಗೆ ಕರೆ ಮಾಡಬೇಕುನ್ನುವುದೇ ಸಮಸ್ಯೆ. ರಜಾ ದಿನಗಳಂದು ಸ್ಪಂದನ ವಿರಳ. ಈ ಹಿನ್ನಲೆಯಲ್ಲಿ ಜಿಪಿಎಸ್ ಲೋಕೇಶನ್ ತೋರಿಸುವ ಉಡುಪಿ ಹೆಲ್ಪ್.ಕಾಂ ಆ್ಯಪ್‍ನಲ್ಲಿ ಸಮಸ್ಯೆಗಳನ್ನು ಬಿಂಬಿಸುವ ಫೋಟೋ ಮತ್ತು ಆಡಿಯೋಗಳನ್ನು ಅಳವಡಿಸಬಹುದು.

ನಗರಸಭೆ ಅಧಿಕಾರಿ ಸಿಬ್ಬಂದಿ. ಆರು ಗಂಟೆಯೊಳಗೆ ಸಮಸ್ಯೆಗೆ ಸ್ಪಂದಿಸುವುದು ಮಾತ್ರವಲ್ಲ, ಸಮಸ್ಯೆ ಬಗೆಹರಿದ ಬಳಿಕ ಫೋಟೋ ಅಥವಾ ವಿಡಿಯೋ ಅಳವಡಿಸಿ ಸಾಕ್ಷ್ಯ ಒದಗಿಸಬೇಕು. ಈ ನೂತನ ಆ್ಯಪ್ ಒಂದು ವಾರದೊಳಗೆ ಗೂಗಲ್ ಪ್ಲೇ ಸ್ಟೋರ್‌ ನಲ್ಲಿ ಲಭ್ಯವಾಗುವಂತೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.