ಪ್ರಿಯಾಂಕಾ ಉಪೇಂದ್ರ ಮುಖ್ಯ ಭೂಮಿಕೆಯ ‘ದೇವಕಿ’ ಸಿನಿಮಾ ಈಗಾಗಲೇ ಹಲವು ಕಾರಣಗಳಿಂದ ಸುದ್ದಿಯಲ್ಲಿದೆ. ಚೈಲ್ಡ್ ಟ್ರಾಫಿಕಿಂಗ್ ಕುರಿತಾಗ ಬಹುಮುಖ್ಯ ಕಥೆಯುಳ್ಳ ಸಿನಿಮಾ ಅನ್ನೋದು ಒಂದೆಡೆಯಾದ್ರೆ, ಉಪೇಂದ್ರ ಮಗಳು ಐಶ್ವರ್ಯ ಈ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಲಾಂಚ್ ಆಗ್ತಿದ್ದಾರೆ ಅನ್ನೋದು ಇನ್ನೊಂದು ವಿಶೇಷ. ಜೊತೆಗೆ ಹಿಂದಿಯ ನವ ನಟನೊಬ್ಬ ದೇವಕಿ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಡ್ತಿದ್ದಾರೆ. ರಾಮ್‍ಗೋಪಾಲ್ ವರ್ಮಾ ನಿರ್ದೇಶನದಲ್ಲಿ ಮೂಡಿಬಂದಿದ್ದ ದಿ ಅಟ್ಯಾಕ್ಸ್ 26/11′ ಚಿತ್ರದಲ್ಲಿ ಕಸಬ್ ಪಾತ್ರ ಮಾಡಿದ್ದ ಸಂಜೀವ್ ಜೈಸ್ವಾಲ್ ದೇವಕಿ ಚಿತ್ರದಲ್ಲಿ ನಟಿಸಲಿದ್ದಾರೆ.
ಕಿರುತೆರೆಯಲ್ಲಿ ಚಿಕ್ಕ-ಪುಟ್ಟ ಪಾತ್ರಗಳನ್ನು ಮಾಡುತ್ತಾ ಸಿನಿಪಯಣ ಆರಂಭಿಸಿದ ಸಂಜೀವ್ ಜೈಸ್ವಾಲ್ ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ. ಚಿತ್ರದಲ್ಲಿ ಉಗ್ರರ ಪೈಕಿ ಸಿಕ್ಕ ಏಕೈಕ ವ್ಯಕ್ತಿ ಅಜ್ಮಲ್ ಕಸಬ್‍ನ ಪಡಿಯಚ್ಚಂತಿರುವ ಸಂಜೀವ್ ಜೈಸ್ವಾಲ್ ಅಭಿನಯ ಪಿಕ್ಚರ್ ಪರ್ಫೆಕ್ಟ್ ಆಗಿ ಮೂಡಿಬಂದಿತ್ತು. ಅಜ್ಮಲ್‍ನಲ್ಲಿದ್ದ ಕ್ರೌರ್ಯತೆ, ನಿರ್ದಾಕ್ಷಿಣ್ಯತೆ, ಹೇಡಿತನವನ್ನು ಸಂಜೀವ್ ಜೈಸ್ವಾಲ್ ಅತ್ಯಂತ ಪರಿಣಾಮಕಾರಿಯಾಗಿ ಅಭಿನಯಿಸಿದ್ರು. ಇನ್ನು ಇಡೀ ಕಥೆ ಉತ್ತರಭಾರತದಲ್ಲಿ ನಡೆಯಲಿದ್ದು ಅದೇ ಫೀಲ್ ಕೊಡೋ ನಟರು ಬೇಕಿತ್ತಂತೆ. ಹೀಗಾಗಿ ಬಾಲಿವುಡ್ ನಟರೇ ಸೂಕ್ತ ಅಂತಾ ಸಂಜೀವ್ ಜೈಸ್ವಾಲ್‍ನ ಹಾಕಿಕೊಳ್ಳಲಾಗಿದ್ಯಂತೆ.