ಕೆಜಿಎಫ್ ಚಾಪ್ಟರ್ 1ರ ಅಭೂತಪೂರ್ವ ಯಶಸ್ಸಿನ ನಂತರ, ಚಾಪ್ಟರ್ 2ಗಾಗಿ ಯಶ್ ಅಭಿಮಾನಿಗಳಲ್ಲದೆ ವಿಶ್ವ ಸಿನಿಪ್ರೇಮಿಗಳು ಕಾತರ-ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
ಈಗಾಗಲೇ ಬೆಂಗಳೂರಿನಲ್ಲಿ ಶೂಟಿಂಗ್ ಶುರು ಮಾಡಿಕೊಂಡಿರುವ ಚಿತ್ರತಂಡವನ್ನು ಯಶ್ ಇನ್ನಷ್ಟೇ ಸೇರಿಕೊಳ್ಳಲಿದ್ದಾರೆ. ಹೀಗಿರುವಾಗ ಚಿತ್ರದ ಉಳಿದೆಲ್ಲಾ ಕಾರ್ಯಗಳು ಭರದಿಂದ ಸಾಗುತ್ತಿದ್ದು, ರವಿ ಬಸ್ರೂರು ಜಾಗತಿಕ ಮಟ್ಟದಲ್ಲಿ ಸಂಗೀತ ಸಂಯೋಜನೆಯ ಕಾರ್ಯವನ್ನು ಮಾಡುತ್ತಿದ್ದಾರೆ.
ಚಾಪ್ಟರ್ 1ರಲ್ಲಿ ಹಲವು ಖಳನಾಯಕರಿದ್ದು ಅದರಲ್ಲಿ ರಾಕಿಗೆ ಸುಪಾರಿ ಕೊಟ್ಟಿದ್ದ ಆ್ಯಂಡ್ರ್ಯೂಸ್ ಕ್ಲೈಮ್ಯಾಕ್ಸ್ ವೇಳೆ ರಾಕಿಗೆ ವಿಲನ್ ಆಗಿ ಬದಲಾಗುವ ಹಾಗೆ ಕಥೆಯಲ್ಲಿ ಟ್ವಿಸ್ಟನ್ನು ಇಟ್ಟಿದ್ದರು ನಿರ್ದೇಶಕ ಪ್ರಶಾಂತ್ ನೀಲ್. ಹಾಗಾಗಿ ಚಾಪ್ಟರ್ 2ನಲ್ಲಿ ರಾಕಿ ಹಾಗು ಆ್ಯಂಡ್ರ್ಯೂಸ್ ನಡುವೆ ದೊಡ್ಡ ಕಾಳಗ ನಡೆಯುವ ಸಾಧ್ಯತೆ ದಟ್ಟವಾಗಿರುವುದರಿಂದ ಆ್ಯಂಡ್ರ್ಯೂಸ್ ಜಿಮ್ನ ಲ್ಲಿ ವರ್ಕ್ ಔಟ್ ಮಾಡಲು ಆರಂಭಿಸಿದ್ದಾರೆ.
ಕಳೆದ ಬಾರಿ ಪ್ರಮುಖ ವಿಲನ್ ಆಗಿದ್ದ ಗರುಡನಂತೆ ಈ ಬಾರಿ ಪ್ರಮುಖ ವಿಲನ್ ಅಧಿರ ಆಗಿರುತ್ತಾನೋ ಅಥವಾ ಇನಾಯತ್ ಖಲೀಲ್ ಆಗಿರುತ್ತಾನೋ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ.