ಬಿಗ್ ಬ್ರೇಕಿಂಗ್ – ‘ರಾಜ್ಯ ಸರಕಾರಕ್ಕೆ ಮತ್ತೊಂದು ಸಂಕಷ್ಟ’, 9 ಶಾಸಕರೊಂದಿಗೆ ಗೋವಾಕ್ಕೆ ಹಾರಿದ ರಮೇಶ್ ಜಾರಕಿಹೊಳಿ – ಕಹಳೆ ನ್ಯೂಸ್
ಬೆಂಗಳೂರು : ರಾಜ್ಯ ರಾಜಕಾರಣದ ಜಿದ್ದಾಜಿದ್ದಿಯಲ್ಲಿ ಕೈ ಪಡೆಯನ್ನ ಸೋಲಿಸಿ ಕಮಲ ಪಾಳಯ ಗೆಲುವಿನ ಗದ್ದುಗೆ ಏರಿದ್ದಾರೆ. ಮುಂದೆ ಮೈತ್ರಿ ಸರ್ಕಾರದ ನಡೆ ಏನು ಅನ್ನೋದನ್ನ ಯೋಚಿದುತ್ತಿರುವಾಗಲೇ . ಇದೀಗ ದೋಸ್ತಿ ಸರಕಾರಕ್ಕೆ ಕಂಟಕವಾಗಿರುವ ರಮೇಶ್ ಜಾರಕಿಹೊಳಿಯರ ನಡೆ ದಿನದದಿಂದ ದಿನಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಲ್ಲಿ ಆತಂಕ ಮೂಡಿಸಿದೆ. ಈ ನಡುವೆ ಶಾಸಕ ರಮೇಶ್ ಜಾರಕಿಹೊಳಿ ಶನಿವಾರ ಮಧ್ಯಾಹ್ನ ಮಗ ಅಮರನಾಥ ಜೊತೆ ಬೆಂಗಳೂರಿನಿಂದ ದೆಹಲಿಗೆ ಹೋಗಿದ್ದರು. ಅಲ್ಲಿಂದ ನೇರವಾಗಿ ಗೋವಾಗೆ ತೆರಳಿದ್ದಾರೆ ಎನ್ನಲಾಗಿದೆ.
ಬರೀ ರಮೇಶ್ ಜಾರಕಿಹೊಳಿ ಮಾತ್ರ ಗೋವಾಕ್ಕ ತೆರಳಿಲ್ಲ, ಅವರೊಂದಿಗೆ 9 ಶಾಸಕರು ಗೋವಾ ಖಾಸಗಿ ಹೊಟೇಲ್‍ಗೆ ತೆರಳಲಿದ್ದಾರೆ ಎನ್ನಲಾಗಿದೆ. ಗೋವಾದ ಪೋರ್ಟ್ ಅಗೋಡಾದಲ್ಲಿರುವ ಐಷಾರಾಮಿ ಪೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಇದೇ ಹೋಟೆಲ್‍ನಲ್ಲಿ ಸುಮಾರು 30 ರೂಮ್ ಬುಕ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಈ ಮೇ 29ರ ವರಗೆ ರೆಸಾರ್ಟಿನಲ್ಲಿದ್ದು ದೆಹಲಿಯಿಂದ ಹಸಿರು ನಿಶಾನೆ ದೊರೆಯುತ್ತಿದ್ದಂತೆ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.