ಮಂಗಳೂರು : 20ದಿನಗಳಿಂದ ಸುರತ್ಕಲ್, ಗುಡ್ಡೆ ಕೊಪ್ಪಳ, ತಣ್ಣೀರುಬಾವಿ, ಬೈಕಂಪಾಡಿ, ಪಣಂಬೂರು, ಸಮುದ್ರಕಿನಾರೆಯಲ್ಲಿ ಸಂಗ್ರಹವಾಗಿ ಸುದ್ದಿಯಾಗಿದ್ದ ತ್ಯಾಜ್ಯ ಸಂಗ್ರಹ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ
ಶನಿವಾರ ಪಣಂಬೂರು ಬೀಚ್‍ನಲ್ಲಿ ಅಪಾರ ಪ್ರಮಾಣದ ಡಾಂಬರು ತೀರಕ್ಕೆ ಬಂದು ಅಪ್ಪಳಿಸಿತ್ತು ಭಾನುವಾರ ಹೊಸಬೆಟ್ಟು , ಗುಡ್ಡೆಕೊಪ್ಪ ಪಣಂಬೂರು, ತಣ್ಣೀರುಬಾವಿ ವರೆಗೂ ಡಾಂಬರು ಸಂಗ್ರಹವಾಗಿದೆ.
ಇದರಿಂದ ಮೀನುಗಳು ಕರಾವಳಿಗೆ ಬರುವುದಿಲ್ಲ ಎಂಬುದು ಮೀನುಗಾರರ ದೂರು. ಸಮುದ್ರತೀರಕ್ಕೆ ತೆರಳಿದರೆ ಕಾಲಿಗೆ ಪಾದರಕ್ಷೆಗೆ ಡಾಂಬರು ಅಂಟಿಕೊಳ್ಳುತ್ತದೆ ಎನ್ನುತ್ತಾರೆ ಸಮುದ್ರದ ತೀರಕ್ಕೆ ತೆರಳಿದವರು ಸಮಸ್ಯೆ ಬಗ್ಗೆ ಹಲವಾರು ಬಾರಿ ಮಾಧ್ಯಮಗಳು ಪ್ರಸಾರ ಮಾಡಿದರು ಈ ಬಗ್ಗೆ ಯಾರು ಗಮನ ಹರಿಸಿಲ್ಲ. ಇನ್ನು ಸಮಸ್ಯೆ ಪರಿಹಾರವಾಗಿಲ್ಲ.