Monday, January 20, 2025
ಸುದ್ದಿ

ಬೇರೆಯವರ ಜಾಗದಲ್ಲಿ ತ್ಯಾಜ್ಯ ಹಾಕುತ್ತಿದ್ದ ಅಧಿಕಾರಿಯ ಬಂಧನ – ಕಹಳೆ ನ್ಯೂಸ್

ಕಾಪು: ಕಾಪು ಪುರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಸ್ವಚ್ಛತಾ ವಿಷಯದಲ್ಲಿ ಪ್ರಶಸ್ತಿಗಳನ್ನೂ ಗಿಟ್ಟಿಸಿಕೊಂಡಿರುವ ಅಧಿಕಾರಿ ರಾಯಪ್ಪನವರ ಹೊಸ ಅವತಾರದ ರಹಸ್ಯ ಬಯಲುಗೊಂಡಿದೆ. ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಎರ್ಮಾಳಿನಲ್ಲಿ ಮೊಗಾನ್ ಎಂಬ ವ್ಯಕ್ತಿಗೆ ಸಂಬಂಧ ಪಟ್ಟ ಜಮೀನಿನಲ್ಲಿ ಕಾಪು ಪುರಸಭೆ ಅಧಿಕಾರಿ ರಾಯಪ್ಪನವರ ಆದೇಶದ ಮೇರೆಗೆ ಕಸವನ್ನು ತಂದುಹಾಕಲಾಗುತ್ತಿದೆ. ಗುತ್ತಿಗೆದಾರ ಜಗದೀಶ್ವರ್ ಕಾಪು ಪುರಸಭೆಗೆ ಸಂಬಂಧಪಟ್ಟ ಎಲ್ಲ ಕೊಳಕು, ನಾರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಟಿಪ್ಪರ್‍ಗಳಲ್ಲಿ ತಂದು ಸುರಿದಿದ್ದು ಇದನ್ನು ಗಮನಿಸಿದ ಸಾರ್ವಜನಿಕರು ಈ ಘಟನೆಯ ಮಾಹಿತಿಯನ್ನು ಕೂಡಲೇ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ರಾಯಪ್ಪರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಲ್ ಮದೀನಾದ ಯಂಗ್ ಮೆನ್ಸ್ ನ ಕಾರ್ಯದರ್ಶಿ ಆಶಿಕ್ ಮತ್ತು ಸದಸ್ಯರು, ಬಿಜೆಪಿ ಬಡಾ ಗ್ರಾಮ ಸಮಿತಿಯ ಅಧ್ಯಕ್ಷ ಉದಯ್ ಕುಮಾರ್ ಎರ್ಮಾಳ್, ಗ್ರಾಮ ಪಂಚಾಯತ್ ಸದಸ್ಯ ಶಿವಕುಮಾರ್ ಮೆಂಡನ್ ಮತ್ತಿತ್ತರರು ಸಹಕರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು