Recent Posts

Monday, January 20, 2025
ಸುದ್ದಿ

ಮೋದಿ ‘ಅಭಿನಂದನೆ’ ಅಂದ್ರೆ ಪಾಕಿಸ್ತಾನ ‘ಅಭಿನಂದನ್’ ಅನ್ನುತ್ತೆ : ನಗೆ ಪಾಟಲಿಕೆಗೆ ಗುರಿಯಾದ ಪಾಕಿಸ್ತಾನ – ಕಹಳೆ ನ್ಯೂಸ್

ಪುಲ್ವಾಮ ದಾಳಿ ಬಳಿಕ ಪಾಕಿಸ್ತಾನದೊಂದಿಗೆ ಭಾರತ ನಡೆಸಿದ ಪ್ರತಿಯೊಂದು ದಾಳಿಯೂ ಪಾಕಿಸ್ತಾನಕ್ಕೆ ನಡುಕಹುಟ್ಟಿಸಿದೆ, ಎಲ್ಲಿಯವರೆಗೆ ಪಾಕಿಸ್ತಾನ ಭಯಬೀತವಾಗಿದೆ ಅಂದರೆ ನರೇಂದ್ರ ಮೋದಿಯ ಪ್ರತಿ ಮಾತಲ್ಲೂ ಪಾಕಿಸ್ತಾನ ಎಚ್ಚರಿಕೆಗಳನ್ನೇ ಹುಡುಕುತ್ತಿದೆ. ಇನ್ನು ಮೋದಿ ಮತ್ತೊಮ್ಮೆ ಪ್ರಧಾನಿ ಆಗುತ್ತಿರುವುದು ಸಹಜವಾಗಿಯೇ ಪಾಕಿಸ್ತಾನಕ್ಕೆ ಆತಂಕ ತಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೋದಿ ಅವರು ಪ್ರಧಾನಿಯಾದ ಬಳಿಕ ಮಾಡಿದ ಭಾಷಣದಲ್ಲಿ ತಮ್ಮ ಕಾರ್ಯಕರ್ತರಿಗೆ, ಜನರಿಗೆ ‘ಅಭಿನಂದನೆ’ಗಳನ್ನು ಮೋದಿ ಸಲ್ಲಿಸಿದ್ದರು. ಆದರೆ ಭಾಷಣವನ್ನು ತಪ್ಪಾಗಿ ಅರ್ಥೈಸಿಕೊಂಡ ಪಾಕಿಸ್ತಾನದ ಮಾಧ್ಯಮ. ಮೋದಿ ಅವರು ಕೋಟಿ, ಕೋಟಿ ವಿಂಗ್ ಕಮಾಂಡರ್ ‘ಅಭಿನಂದನ್’ ಅವರು ಹುಟ್ಟಬೇಕು ಎಂದಿದ್ದಾರೆ ಎಂದು ವರದಿ ಮಾಡಿದೆ.
ಮೋದಿ ಅವರು ಹಿಂದಿಯಲ್ಲಿ ಮಾಡಿದ ಭಾಷಣದಲ್ಲಿ, ‘ಕೋಟಿ,ಕೋಟಿ ಅಭಿನಂದನ್’ ಎಂದಿದ್ದರು. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಪಾಕಿಸ್ತಾನದ ಎಆರ್‍ ವೈ ನ್ಯೂಸ್ ಎಂಬ ಚಾನೆಲ್, ಮೋದಿ ಅವರು ತಮ್ಮ ಗೆಲುವಿನ ಶ್ರೇಯವನ್ನು ‘ಅಭಿನಂದನ್’ಗೆ ಅರ್ಪಿಸಿದ್ದಾರೆ. ಕೋಟಿ, ಕೋಟಿ ‘ಅಭಿನಂದನ್’ಗಳು ಎದ್ದು ಬರಬೇಕು ಎಂದು ಹೇಳಿದ್ದಾರೆ ಎಂದು ಮೋದಿ ಭಾಷಣದ ವಿಡಿಯೋ ತುಣುಕಿನೊಂದಿಗೆ ಪ್ರಸಾರ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎಆರ್‍ ವೈ ಅವರು ವರದಿ ಮಾಡಿರುವ ಸುದ್ದಿಯ ವಿಡಿಯೋ ಟ್ವಿಟ್ಟರ್‍ ನಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ಟ್ರೋಲ್‍ಗೆ ಗುರಿಯಾಗಿದೆ. ಪಾಕಿಸ್ತಾನದವರೂ ಸಹ ಎಆರ್‍ ವೈ ಅನ್ನು ಟ್ರೋಲ್ ಮಾಡುತ್ತಿದ್ದಾರೆ.

ಪಾಕಿಸ್ತಾನದಲ್ಲಿ ಪ್ರತಿನಿತ್ಯ ಮೋದಿ ಬಗ್ಗೆಯೇ ಜಪ ನಡೆಯುತ್ತಿದೆ ಅನ್ನೊದು ಇಲ್ಲಿ ಸ್ಪಪ್ಟವಾಗಿದೆ. ಅಂತೆಯೇ ವಿಂಗ್ ಕಮಾಂಡರ್ ಅಬಿನಂದನ್ ಸಾಹಸ ಇನ್ನು ಪಾಕಿಸ್ತಾನದ ನೆಲದಲ್ಲಿ ಬೇರೂರಿದ್ದು, ಮೋದಿ ಬಾಯಿ ಬಿಟ್ಟರೆ ಪಾಕಿಸ್ತನ ಭಯ ಪಡುವಂತಾಗಿದೆ,