Recent Posts

Monday, January 20, 2025
ಸುದ್ದಿ

ಅಂದು ನೆಹರೂ ನಿಂದನೆ, ಇಂದು ನೆಹರೂ ಆರಾಧನೆ!- ಕಹಳೆ ನ್ಯೂಸ್

ಸ್ವತಂತ್ರ್ಯ ಭಾರತದ ಮೊದಲ ಪ್ರಧಾನಿ ಜವಾಹಾರ್ ಲಾಲ್ ನೆಹರು ಅವರು ಪುಣ್ಯ ತಿಥಿ ಅಂಗವಾಗಿ ಇಂದು ನರೇಂದ್ರ ಮೋದಿ ಅವರು ನೆಹರೂ ಅವರನ್ನು ನೆನಪಿಸಿಕೊಂಡು ಟ್ವೀಟ್ ಮಾಡಿದ್ದಾರೆ. ನೆಹರು ಅವರ ಪುಣ್ಯತಿಥಿಯಂದು ಅವರಿಗೆ ಗೌರವ ಸಲ್ಲಿಸುತ್ತೇವೆ, ಅವರು ದೇಶಕ್ಕೆ ನೀಡಿದ ಕೊಡುಗೆಗಳನ್ನು ಸದಾ ಸ್ಮರಿಸುತ್ತೇವೆ ಎಂದು ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ನರೇಂದ್ರ ಮೋದಿ ಅವರು ಇಂದು ವಾರಣಾಸಿಯಲ್ಲಿದ್ದು, ವಿವಿಧ ಪೂಜೆ ಮತ್ತು ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಇದರ ನಡುವೆ ಟ್ವೀಟ್ ಮಾಡಿ ನೆಹರೂ ಅವರನ್ನು ನೆನಪಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೋದಿ ಅವರು ಕೆಲವು ದಿನಗಳ ಹಿಂದಷ್ಟೆ ಚುನಾವಣಾ ಪ್ರಚಾರದ ಸಮಯದಲ್ಲಿ ಇದೇ ನೆಹರೂ ಅವರನ್ನು ಟೀಕಿಸಿದ್ದರು. ನೆಹರು ಅಸೂಕ್ಷ್ಮ ಪ್ರಧಾನಿ ಆಗಿದ್ದರು ಎಂದಿದ್ದರು. ಅಷ್ಟೆ ಅಲ್ಲದೆ ಕಾಂಗ್ರೆಸ್ ಭಾರತವನ್ನು ಹಾವಾಡಿಗರ ದೇಶವೆಂದು ಬಿಂಬಿಸಿತ್ತು ಎಂದು ನೆಹರು ಅವರ ಮೇಲೆ ವಾಗ್ದಾಳಿ ನಡೆಸಿದ್ದರು. ಹಿಂದೊಮ್ಮೆ ಗುಲಾಬಿಯನ್ನು ಧರಿಸುತ್ತಿದ್ದ ವ್ಯಕ್ತಿಗೆ ಉದ್ಯಾನಗಳ ಬಗ್ಗೆ ಮಾಹಿತಿ ಇತ್ತಷ್ಟೆ ವಿನಃ ರೈತರ ಬಗ್ಗೆ ಕಾಳಜಿ ಇರಲಿಲ್ಲ, ಹಾಗಾಗಿ ಭಾರತದ ರೈತರು ಇನ್ನೂ ಕಷ್ಟದಲ್ಲಿದ್ದಾರೆ ಎಂದು ನೆಹರು ಹೆಸರು ಹೇಳಿದೆ ಟೀಕಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು