Recent Posts

Sunday, January 19, 2025
ಸಿನಿಮಾಸುದ್ದಿ

ಅಂಟಗೋನಿ ಶೆಟ್ಟಿ ಆಗಲು ರಿಷಬ್ ಶೆಟ್ಟಿ ರೆಡಿ-ಕಹಳೆ ನ್ಯೂಸ್

ನಿರ್ದೆಶನದ ಮೂಲಕ ಸದ್ದು ಮಾಡಿದ ರಿಷಬ್ ಶೆಟ್ಟಿ ಬೆಲ್‍ಬಾಟಾಮ್ ಚಿತ್ರದಲ್ಲಿ ನಟಿಸಿ ನಿರ್ದೇಶನಕ್ಕೂ ನಟನೆಗೂ ಸೈ ಎನಿಸಿಕೊಂಡಿದ್ದಾರೆ. ಈಗಾಗಲೇ ಟೈಟಲ್ ಮೂಲಕ ಸಂಚಲನಗೊಳ್ಳುತ್ತಿರುವ ‘ಅಂಟಗೋನಿ ಶೆಟ್ಟಿ’ ಚಿತ್ರದ ಚಿತ್ರೀಕರಣ ಜನವರಿಯಲ್ಲಿ ಆರಂಭವಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀಪಾದ್ ಜೋಶಿ ಹಾಗೂ ಸಮರ್ಥ್ ಕಡ್ಕೋಳ್ ಇಬ್ಬರೂ ಕೂಡ ರಿಷಬ್ ಡೈರೆಕ್ಷನ್ ಟೀಮ್‍ನಲ್ಲಿದ್ದವರು. ಶ್ರೀಪಾದ್ ಜೋಶಿ ಮತ್ತು ಸಮರ್ಥ್ ಕಡ್ಕೋಳ್ ಇಬ್ಬರೂ ಕೂಡ ಹಿಂದಿ ಇಂಡಸ್ಟ್ರಿಯಿಂದ ಬಂದವರು. ನಿರ್ದೇಶಕ ಸಮರ್ಥ್ ಕಡ್ಕೋಳ್ ಈ ಕಥೆಯನ್ನು ರಿಷಬ್‍ಗಾಗಿ ಬರೆದಿದ್ದಾರೆ ಅಂತ ಗೊತ್ತೇ ಇರಲಿಲ್ಲವಂತೆ. ಇದು ಹುಬ್ಬಳ್ಳಿಯಿಂದ ಬಾಂಬೆ ತನಕ ಇರುವಂಥ ಜರ್ನಿಯ ಬಗೆಗಿನ ಕಥೆ .

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗಲೇ ರಿಷಬ್ ಶೆಟ್ಟಿ ಕೈಯಲ್ಲಿ ಕಥಾಸಂಗಮ ಹಾಗು ನಾಥೂರಾಮ್ ಸಿನಿಮಾಗಳಿವೆ. ಅದರಲ್ಲಿ ಕಥಾಸಂಗಮದ ಕೆಲಸಗಳು ಈಗಾಗಲೆ ಪೂರ್ಣಗೊಂಡಿದ್ದು ನಾಥೂರಾಮ್‍ಗೆ ಚಿತ್ರಿಕರಣಗೊಳ್ಳುತ್ತಿದೆ. ಈ ಪ್ರಾಜೆಕ್ಟ್ ಎಲ್ಲಾ ಮುಗಿದ ಬಳಿಕ ‘ಅಂಟಗೋನಿ ಶೆಟ್ಟಿ’ ಆರಂಭವಾಗಲಿದೆ ಎನ್ನಲಾಗಿದೆ.