Sunday, January 19, 2025
ಸುದ್ದಿ

ತಡರಾತ್ರಿ ವ್ಯಕ್ತಿಯ ಬರ್ಬರ ಹತ್ಯೆ – ಕಹಳೆ ನ್ಯೂಸ್

ಬೆಳ್ತಂಗಡಿ: ಬೆಳ್ತಂಗಡಿ ಪೋಲೀಸ್ ಠಾಣಾ ವ್ಯಾಪ್ತಿಯ ಮುಂಡೂರು ಎಂಬಲ್ಲಿ ಸೋಮವಾರ ತಡರಾತ್ರಿ ಸರಕಾರಿ ಐಟಿಐ ಉಪನ್ಯಾಸಕ ವಿಕ್ರಮ್ ಎಂಬವರನ್ನು ಅಪರಿಚಿತರು ಮಚ್ಚಿನಿಂದ ಕಡಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ತಡರಾತ್ರಿ 11ಗಂಟೆಗೆ ಅಪರಿಚಿತ ದ್ವಿಚಕ್ರ ವಾಹನ ನಿಂತದ್ದನ್ನು ಕಂಡು ಸ್ಥಳೀಯರು ಅನುಮಾನ ಪಟ್ಟಿದ್ದಾರೆ. ಯಾವುದೋ ಕಾರಣಕ್ಕೆ ಕೊಲೆಮಾಡಿರಬಹುದು ಎಂದು ಶಂಕಿಸಿದ್ದಾರೆ. ವಿಕ್ರಮ್ ಅವರ ಕಾರಿನ ಬಳಿ ಮದ್ಯದ ಬಾಟಲಿ ಇದ್ದು, ಕುಡಿದ ಮತ್ತಿನಲ್ಲಿ ಜಗಳವಾಡಿ ಕೊಲೆ ಮಾಡಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು