Monday, November 25, 2024
ಸುದ್ದಿ

ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್​ನಲ್ಲಿ ವುಮೆನ್ ಪವರ್ – ಕಹಳೆ ನ್ಯೂಸ್

ನವದೆಹಲಿ: ಭಾರತೀಯ ವಾಯುಸೇನೆಯ ಹೆಲಿಕಾಪ್ಟರ್ ಒಂದು ಸಂಪುರ್ಣವಾಗಿ ಮಹಿಳೆಯರಿಂದಲೇ ನಿಯಂತ್ರಿಸಲ್ಪಟ್ಟು ಐತಿಹಾಸಿಕ ಸಾಧನೆ ಮಾಡಿದೆ. ಇದೇ ಮೊದಲ ಬಾರಿಗೆ ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿ ಜೊತೆ ಹೆಲಿಕಾಪ್ಟರ್ ಆಗಸಕ್ಕೆ ಹಾರಿದೆ. ಭಾರತೀಯ ವಾಯುಪಡೆಯ ಎಂಐ-17 ವಿ5 ಯುದ್ಧ ಹೆಲಿಕಾಪ್ಟರ್​ನಲ್ಲಿ ಮಹಿಳಾ ಪೈಲಟ್​ಗಳು ಸೇರಿ ಒಟ್ಟು ಮೂವರು ಮಹಿಳೆಯರು ಹಾರಾಟ ನಡೆಸಿದ್ದಾರೆ. ಕ್ಯಾಪ್ಟನ್,​ ಫ್ಲೈಟ್ ಲೆಫ್ಟಿನೆಂಟ್​ ಪರೂಲ್​ ಭಾರಧ್ವಜ್​, ಕೋ ಪೈಲಟ್​ ಅಮನ್ ನಿಧಿ ಹಾಗೂ ಫ್ಲೈಟ್ ಇಂಜಿನಿಯರ್​ ಆಗಿರುವ ಫ್ಲೈಟ್ ಲೆಫ್ಟಿನೆಂಟ್ ಹೀನಾ ಜೈಸ್ವಾಲ್​​ ಸೇನಾ ಹೆಲಿಕಾಪ್ಟರ್​ನಲ್ಲಿ ಹಾರಾಟ ನಡೆಸಿದ್ರು.

ಇನ್ನು ಛತ್ತೀಸ್​​​​ಘಡ ಮೂಲದ ಹೀನಾ ಜೈಸ್ವಾಲ್​​ ಭಾರತೀಯ ವಾಯುಸೇನೆಯ ಮೊದಲ ಮಹಿಳಾ ಇಂಜಿನಿಯರ್​ ಎಂಬ ಕೀರ್ತಿಗೆ ಭಾಜನರಾಗಿದ್ದರು. ವಿಶೇಷ ಅಂದ್ರೆ ಹೆಲಿಕಾಷ್ಟರ್​ ಚಾಲನೆಗೆ ಬೇಕಾದ ಅತ್ಯುನ್ನತ ತರಬೇತಿಯನ್ನ ಬೆಂಗಳೂರಿನ ಯಲಹಂಕಾ ವಾಯುನೆಲೆ ಶಿಬಿರ ಹಾಗೂ ತೆಲಂಗಾಣದ ಹಕೀಂಪೇಟೆಯ ಶಿಬಿರದಲ್ಲಿ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು