Monday, November 25, 2024
ರಾಜಕೀಯಸುದ್ದಿ

ಲೋಕಸಭೆಯಲ್ಲಿ ಪ್ರಚಂಡ ಜನಾದೇಶ ಪಡೆದಿರುವ ಬಿಜೆಪಿ: ರಾಜ್ಯಸಭೆಯಲ್ಲೂ ಬಹುಮತ ಸಾಧಿಸುವ ಸಾಧ್ಯತೆ – ಕಹಳೆ ನ್ಯೂಸ್

2019ರ ಲೋಕಸಭೆಯಲ್ಲಿ ಪ್ರಚಂಡ ಜನಾದೇಶ ಪಡೆದಿರುವ ಬಿಜೆಪಿ, ಮೇಲ್ಮನೆ ರಾಜ್ಯಸಭೆಯಲ್ಲೂ 2020ರೊಳಗೆ ಬಹುಮತ ಸಾಧಿಸುವ ಸಾಧ್ಯತೆ ಇದೆ. ಹೌದು ಅದು ಹೇಗೆ ಅಂದ್ರೆ ಈ ವರ್ಷದಲ್ಲಿ ರಾಜ್ಯಸಭೆಯ 10 ಸೀಟುಗಳು ಹಾಗೂ ಮುಂದಿನ ವರ್ಷ 2020ರಲ್ಲಿ ಒಟ್ಟು 72 ಸೀಟುಗಳು ತೆರವಾಗಲಿದ್ದು, ಈ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಪೈಕಿ ಹಲವು ಚುನಾವಣೆ ಬಿಜೆಪಿಯ ಪಾರುಪತ್ಯ ಇರೋ ರಾಜ್ಯಗಳಲ್ಲಿ ನಡೆಯೋದ್ರಿಂದ ಕೆಲವೊಂದು ಸ್ಥಾನಗಳನ್ನ ಕಮಲ ಪಾಳಯ ಸುಲಭವಾಗಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ ಎನ್ನಲಾಗಿದೆ. ಸದ್ಯ ರಾಜ್ಯಸಭೆಯ ಒಟ್ಟು 245 ಸದಸ್ಯರ ಪೈಕಿ ಬಹುಮತಕ್ಕೆ 123 ಸದಸ್ಯರ ಸಂಖ್ಯಾಬಲ ಬೇಕು. ಇದರಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ 102, ಕಾಂಗ್ರೆಸ್​ ನೇತೃತ್ವದ ಯುಪಿಎ 65 ಹಾಗೂ ಇತರೆ ಪಕ್ಷಗಳು 73 ಸ್ಥಾನಗಳನ್ನ ಪಡೆದಿವೆ. ಮುಂದಿನ ತಿಂಗಳು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ರಾಜ್ಯಸಭೆ ಅವಧಿ ಮುಗಿಯಲಿದೆ. ಅಲ್ಲದೇ ಮತ್ತೊಬ್ಬ ಕೈ ಸದಸ್ಯ ಕುಜುರ್ ಅವರ​ ಅವಧಿಯೂ ಕೊನೆಗೊಳ್ಳಲಿದೆ. ಈ ಇಬ್ಬರು ಅಸ್ಸಾಂ ರಾಜ್ಯವನ್ನ ಪ್ರತಿನಿಧಿಸಿದ್ದರು. ಸದ್ಯ ಅಸ್ಸಾಂ ವಿಧಾನಸಭೆಯಲ್ಲಿ ಬಿಜೆಪಿ ಪಾರುಪತ್ಯವಿದ್ದು, ಈ ಎರಡು ಸೀಟುಗಳು ಬಿಜೆಪಿ ಪಾಲಾಗಲಿದೆ. ಅಲ್ಲದೇ ಮುಂದಿನ ವರ್ಷ ಉತ್ತರ ಪ್ರದೇಶವನ್ನ ಪ್ರತಿನಿಧಿಸಿರುವ 10 ಸೀಟುಗಳಿಗೆ ಚುನಾವಣೆ ನಡೆಯಲಿದೆ.

ರಾಜ್ಯಸಭೆಯಲ್ಲಿ ಬಹುಮತವಿದ್ದರೆ ಲಾಭವೇನು..?
ಸದ್ಯ ರಾಜ್ಯಸಭೆಯಲ್ಲಿ ಬಿಜೆಪಿಗೆ ಬಹುಮತವಿಲ್ಲದಿರೋದ್ರಿಂದ ತ್ರಿವಳಿ ತಲಾಖ್​ ಮಸೂದೆ, ಪೌರತ್ವ ತಿದ್ದುಪಡಿ ಮಸೂದೆ ಸೇರಿದಂತೆ ಕೆಲವು ಮಸೂದೆಗಳು ಹಾಗೇ ಬಾಕಿ ಉಳಿದಿವೆ. ಬಹುಮತ ಸಿಕ್ಕರೆ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಸುಲಭವಾಗಿ ಮಸೂದೆಗಳನ್ನ ಪಾಸ್​ ಮಾಡಿಕೊಳ್ಳಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು