Monday, November 25, 2024
ಸುದ್ದಿ

ಜನಸಂಖ್ಯಾ ಹೆಚ್ಚಳವನ್ನು ದೇಶಕ್ಕೆ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ: ಬಾಬಾ ರಾಮದೇವ್ – ಕಹಳೆ ನ್ಯೂಸ್

ನವದೆಹಲಿ: ದೇಶದ ಜನಸಂಖ್ಯೆ ನಿಯಂತ್ರಿಸುವುದಕ್ಕಾಗಿ ಕುಟುಂಬದ ಮೂರನೇ ಮಗುವಿಗೆ ಮತದಾನದ ಹಕ್ಕು ನಿಷೇಧಿಸಿ, ಸರ್ಕಾರದ ಸೌಲಭ್ಯಗಳನ್ನೂ ಅವರಿಗೆ ನೀಡಬೇಡಿ ಎಂದು ಯೋಗ ಗುರು ಬಾಬಾ ರಾಮದೇವ್ ಸಲಹೆ ನೀಡಿದ್ದಾರೆ. ದೇಶದಾದ್ಯಂತ ಮದ್ಯದ ಉತ್ಪಾದನೆ, ಮಾರಾಟ ಮತ್ತು ಖರೀದಿಯನ್ನೂ ನಿಷೇಧಿಸಬೇಕು ಎಂದು ರಾಮದೇವ್ ಹೇಳಿದ್ದಾರೆ.

ಭಾನುವಾರ ಹರಿದ್ವಾರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಬಾ, ಮುಂದಿನ 50 ವರ್ಷಗಳಲ್ಲಿ ಭಾರತದ ಜನಸಂಖ್ಯೆ 150 ಕೋಟಿ ಮೀರಬಾರದು. ಜನಸಂಖ್ಯಾ ಹೆಚ್ಚಳವನ್ನು ಸಹಿಸಿಕೊಳ್ಳಲು ದೇಶಕ್ಕೆ ಸಾಧ್ಯವಾಗುವುದಿಲ್ಲ. ಕುಟುಂಬದಲ್ಲಿನ ಮೂರನೇ ಮಗುವಿಗೆ ಮತದಾನದ ಹಕ್ಕು ನಿಷೇಧಿಸಬೇಕು, ಚುನಾವಣೆಯಲ್ಲಿ ಸ್ಪರ್ಧಿಸದಂತೆ ದೇಶದಲ್ಲಿ ಕಾನೂನನ್ನು ಜಾರಿಗೆ ತರಬೇಕು. ಸರ್ಕಾರದ ಯಾವುದೇ ಸೌಲಭ್ಯಗಳು ಇವರಿಗೆ ದಕ್ಕದಂತೆ ಮಾಡಿದರೆ ಜನಸಂಖ್ಯೆಯನ್ನು ನಿಯಂತ್ರಿಸಬಹುದು ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅದೇ ಸಂದರ್ಭದಲ್ಲಿ ಯಾವ ಸಮುದಾಯದವರೇ ಆಗಿರಲಿ ಹೆಚ್ಚು ಮಕ್ಕಳನ್ನು ಹೆರಬಾರದು ಎಂದು ರಾಮದೇವ್ ಹೇಳಿದ್ದಾರೆ. ಹಸು ಕಳ್ಳ ಸಾಗಾಣಿಕೆ ಮಾಡುವವರ ಮತ್ತು ಗೋರಕ್ಷಕರ ನಡುವಿನ ಸಂಘರ್ಷ ತಡೆಯುವುದಕ್ಕಾಗಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದ ಅವರು, ಮಾಂಸಹಾರವೇ ಬೇಕು ಎನ್ನುವವರಿಗೆ ಹಲವು ರೀತಿಯ ಮಾಂಸಗಳು ಇವೆ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಸ್ಲಿಂ ರಾಷ್ಟ್ರಗಳು ಮದ್ಯ ನಿಷೇಧಿಸಿದೆ. ಮುಸ್ಲಿಂ ರಾಷ್ಟ್ರಗಳು ಈ ರೀತಿ ನಿಷೇಧ ಮಾಡುವುದಾದರೆ ಭಾರತದಲ್ಲಿ ಯಾಕೆ ಸಾಧ್ಯವಾಗುವುದಿಲ್ಲ? ಭಾರತದಲ್ಲಿ ಮದ್ಯಕ್ಕೆ ಸಂಪೂರ್ಣ ನಿಷೇಧ ಹೇರಬೇಕು ಎಂದು ರಾಮದೇವ್ ಒತ್ತಾಯಿಸಿದ್ದಾರೆ.