ಶತಮಾನಗಳ ಹಿಂದೆ ಭಾರತೀಯ ಸಮಾಜದ ಪಿಡುಕಾಗಿದ್ದ ‘ಸತಿ ಸಹಗಮನ’ ಪದ್ಧತಿಯ ಬಗ್ಗೆ ಮೆಚ್ಚುಗೆ ಪಡಿಸಿರುವ ಬಾಲಿವುಡ್ ನಟಿ ಪಾಯಲ್ ರೋಹಟಗಿ, ಈ ಪೈಶಾಚಿಕ ಪದ್ಧತಿ ಭಾರತದಿಂದ ನಿರ್ಮೂಲನೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದ, ಪಶ್ಚಿಮ ಬಂಗಾಳದ ಸಮಾಜ ಸುಧಾರಕ ರಾಜಾರಾಮ್ ಮೋಹನ್ ರಾಯ್ ಅವರನ್ನು ದೇಶದ್ರೋಹಿ ಎಂದು ಕರೆದಿರುವುದು ಟ್ವಿಟರ್ ನಲ್ಲಿ ಜಗಳಕ್ಕೆ ಕಾರಣವಾಗಿದೆ.
ಪತಿವ್ರತೆಯರ ಪಾವಿತ್ರ್ಯತೆ ಕಾಪಾಡುವ ಸತಿ ಸಹಗಮನ ಪದ್ಧತಿ ವಿರುದ್ಧ ರಾಜಾರಾಮ್ ಮೋಹನ್ ರಾಯ್ ಹೋರಾಟ ನಡೆಸಿದರು. ರಾಯ್ ಒಬ್ಬ ದೇಶ ದ್ರೋಹಿ, ಬ್ರಿಟಿಷರ ಚಮಚಾ ಎಂದು ಪಾಯಲ್ ಟ್ವೀಟ್ ಮಾಡಿದ್ದರು. ಈ ಬಗ್ಗೆ ಪರ-ವಿರೋಧ ಚರ್ಚೆ ಶುರುವಾಗಿದೆ. ಕೆಲವರು, ಪಾಯಲ್ ಅವರೇ ನೀವು ಜೌಹಾರ್ (ಸ್ವ ಇಚ್ಛೆಯ ಸಹಗಮನ) ಹಾಗೂ ಸತಿ ಸಹಗಮನಗಳ ವ್ಯತ್ಯಾಸ ಕಂಡುಕೊಂಡಿಲ್ಲ ಎಂದಿದ್ದರೆ, ಕೆಲವರು ಪಾಯಲ್ ಪರ ಮಾತನಾಡಿದ್ದಾರೆ.