Sunday, November 24, 2024
ಸುದ್ದಿ

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಸರಸ್ವತಿ ಪೂಜಾ ಕಾರ್ಯಕ್ರಮ – ಕಹಳೆ ನ್ಯೂಸ್

ವಿವೇಕಾನಂದ ಪ.ಪೂ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮದ ಅಂಗವಾಗಿ ಸರಸ್ವತಿ ಪೂಜೆ ಕಾರ್ಯಕ್ರಮವು ಕಾಲೇಜಿನ ಆವರಣದಲ್ಲಿ ಜರಗಿತು. ಸುಮಾರು 2000 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಶೆಕೋಡಿ ಸೂರ್ಯನಾರಾಯಣ ಭಟ್ ಇವರ ನೇತೃತ್ವದಲ್ಲಿ ಪೂಜಾವಿಧಿಗಳು ನೆರವೇರಿದವು.

ಜಾಹೀರಾತು
ಜಾಹೀರಾತು
ಜಾಹೀರಾತು

ಅನಂತರ ನೂತನ ವಿದ್ಯಾರ್ಥಿಗಳನ್ನು ತಿಲಕಧಾರಣೆ ಮಾಡುವುದರ ಮೂಲಕ ಸಂಸ್ಥೆಗೆ ಬರಮಾಡಿಕೊಂಡರು. ಮಹಾಪೂಜೆಯ ಬಳಿಕ ಕಶೆಕೋಡಿ ಸೂರ್ಯನಾರಾಯಣ ಭಟ್ ಮಾತನಾಡಿ ಯಾವುದೇ ಒಂದು ವಿದ್ಯಾಸಂಸ್ಥೆ ಅಥವಾ ವಿದ್ಯಾರ್ಥಿಯು ಬೆಳಗಬೇಕಾದರೆ ತನ್ನೊಳಗಿರುವ ಅಂತ:ಶಕ್ತಿಯನ್ನು ಪ್ರಕಟಪಡಿಸಬೇಕು. ಇದಕ್ಕೆ ವಿದ್ಯಾಧಿದೇವತೆಯಾದ ಸರಸ್ವತಿಯ ಪೂರ್ಣನುಗ್ರಹ ಅತ್ಯಗತ್ಯ. ಈ ದಿಶೆಯಲ್ಲಿ ವಿವೇಕಾನಂದ ಪದವಿಪೂರ್ವ ವಿದ್ಯಾಲಯವು ಮಾದರಿಯಾಗಿ ಪ್ರತಿವರ್ಷವು ಇಂತಹ ಜ್ಞಾನಾಭಿವೃದ್ಧಿ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಂಡು ಬರುತ್ತಿದೆ. ಈ ಮೂಲಕ ಸಂಸ್ಥೆಯಲ್ಲಿ ಕಲಿಯುತ್ತಿರುವ ಎಲ್ಲರಿಗೂ ಆ ಸರಸ್ವತಿಯ ಅನುಗ್ರಹವು ಪ್ರಾಪ್ತಿಯಾಗಲಿ ಎಂದು ಶುಭ ಹಾರೈಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸಂಚಾಲಕ ಸಂತೋಷ್ ಬಿ, ಸದಸ್ಯ ರವಿ ಮುಂಗ್ಲಿಮನೆ, ಪ್ರಾಂಶುಪಾಲ ಡಾ| ಸಿ.ಕೆ. ಮಂಜುನಾಥ್, ಉಪಪ್ರಾಂಶುಪಾಲ ಪರಮೇಶ್ವರ ಶರ್ಮ, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ, ವಿದ್ಯಾರ್ಥಿ ಸಮೂಹ ಪೂರ್ಣಹುತಿಯಲ್ಲಿ ಹಾಜರಿದ್ದು ದೇವರ ಕೃಪೆಗೆ ಪಾತ್ರರಾದರು.