Sunday, November 24, 2024
ಸುದ್ದಿ

ಕರ್ನಾಟಕಕ್ಕೆ ಆಘಾತ: ತಮಿಳುನಾಡಿಗೆ ಕಾವೇರಿ ನೀರು ಬಿಡಲು ಆದೇಶ – ಕಹಳೆ ನ್ಯೂಸ್

ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಕೇಂದ್ರ ಜಲ ಆಯೋಗದ ಕಚೇರಿಯಲ್ಲಿಂದು ನಡೆದ ಈ ಜಲ ವರ್ಷದ ಅಂತಿಮ ಸಭೆಯಲ್ಲಿ ಕರ್ನಾಟಕಕ್ಕೆ ಆಘಾತಕಾರಿ ಸುದ್ದಿ ಬಂದಿದೆ. ತಮಿಳುನಾಡಿಗೆ ನಿಗದಿಯಂತೆ ಕಾವೇರಿ ನದಿ ನೀರು ಬಿಡುವಂತೆ ಕೇಂದ್ರ ಜಲ ಆಯೋಗದ ಮುಖ್ಯಸ್ಥ ಮಸೂದ್ ಹುಸೇನ್ ಆದೇಶಿಸಿದ್ದಾರೆ. ಈ ಮೂಲಕದ ತಮಿಳುನಾಡಿನ ಬೇಡಿಕೆಗೆ ಕಾವೇರಿ ನದಿ ಪ್ರಾಧಿಕಾರ ಮಣಿದಿದೆ.

ತಮಿಳುನಾಡಿಗೆ 9.19 ಟಿಎಂಸಿ ನೀರು ಬಿಡಲು ಆದೇಶಿಸಲಾಗಿದೆ. ಜೂನ್ ತಿಂಗಳ ಕೋಟಾ 9.25 ಟಿಎಂಸಿ ನೀರು ಬಿಡಬೇಕಾಗಿತ್ತು. ಆದರೆ, ಬಹುತೇಕ ಎಲ್ಲಾ ಜಲಾಶಯಗಳಲ್ಲಿ ಡೆಡ್ ಸ್ಟೋರೆಜ್ ಹಂತ ತಲುಪಿದ್ದು, ಕುಡಿಯಲು ನೀರು ಇಲ್ಲದ ಪರಿಸ್ಥಿತಿ ಎದುರಾಗಿದೆ. ಒಟ್ಟಾರೆ, ಕರ್ನಾಟಕದ ಕಾವೇರಿ ಜಲನಯನ ಪ್ರದೇಶದಲ್ಲಿ 3 ರಿಂದ 4 ಟಿಎಂಸಿ ಇರಬಹುದು, ಇದರಲ್ಲಿ ಮುಂದಿನ ಮಳೆಗಾಲದವರೆಗೂ ಕುಡಿಯುವ ನೀರಿನ ಪೂರೈಕೆಗೆ ಬಳಸಬೇಕಾಗುತ್ತದೆ. ಆದರೆ, ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿರುವುದು ಅವೈಜ್ಞಾನಿಕ ಎಂದು ಕರ್ನಾಟಕದ ಪ್ರತಿನಿಧಿಗಳು ವಾದಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎರಡು ರಾಜ್ಯಗಳಲ್ಲಿ ಮಳೆ ಅಭಾವ ಎರಡು ರಾಜ್ಯಗಳಲ್ಲೂ ಮಳೆ ಅಭಾವ ಕಾಡುತ್ತಿದೆ. ಕರ್ನಾಟಕದಲ್ಲಿ ಈ ಬಾರಿ ಮುಂಗಾರುಮಳೆ ಪ್ರವೇಶ ವಿಳಂಬವಾಗಲಿದ್ದು, ಜೂನ್ 8ರ ನಂತರ ಮೊದಲ ಮಳೆ ಸಿಂಚನ ಸಾಧ್ಯತೆಯಿದೆ. ನಮಗೆ ಕುಡಿಯುವ ನೀರಿಲ್ಲ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯದಲ್ಲಿ ಇಂದಿನ ನೀರಿನ ಮಟ್ಟ 81.37 ಅಡಿಗಳಷ್ಟು ನೀರಿದೆ. ಒಟ್ಟಾರೆ 11 ಟಿಎಂಸಿಯಷ್ಟು ನೀರು ಹೊಂದಿದ್ದು, ನಮಗೆ ಕುಡಿಯಲು ನೀರಿಲ್ಲ, ಮಳೆ ಶುರುವಾಗಿ, ನೀರು ಬಂದರೆ ಮಾತ್ರ ಆದೇಶ ಪಾಲಿಸಲು ಸಾಧ್ಯ, ಈ ಬಗ್ಗೆ ನೂತನ ಸಂಸದೆ ಸುಮಲತಾ ಅಂಬರೀಷ್ ಅವರು ಮೋದಿ ಅವರ ಜೊತೆ ಮಾತನಾಡಬೇಕಿದೆ ಎಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು