Sunday, November 24, 2024
ಸುದ್ದಿ

ಶ್ರೀ ಸಂಜೀವ ಪುನಳೇಕರರ ಬಿಡುಗಡೆಗೆ ಶ್ರೀ ರಾಮಸೇನಾ ಕಾರ್ಯಕರ್ತರಿಂದ ಸರಕಾರಕ್ಕೆ ಮನವಿ – ಕಹಳೆ ನ್ಯೂಸ್

ಮಂಗಳೂರು ; ಹಿಂದೂಗಳ ಪರವಾಗಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದ ಶ್ರೀ ಸಂಜೀವ ಪುನಳೇಕರರವರು ಸನಾತನ ಸಂಸ್ಥೆಯ ಪರ ನ್ಯಾಯಾವಾದಿ ದಾಬೋಲ್ಕರ್, ಗೌರಿ ಲಂಕೇಶ್ ಹತ್ಯಾ ನಿರಪರಾಧಿ ಹಿಂದೂಗಳ ಪರ, ಸಾಧ್ವಿ, ಪ್ರಜ್ನಾ ಸಿಂಗ್, ಹಾಗೂ ಪ್ರಮೋದ್ ಮುತಾಲಿಕರ ಗೋವಾ ಪ್ರವೇಶ ನಿಷಿದ್ಧದ ವಿರುದ್ಧ ಹೋರಾಟದಲ್ಲಿ ಪ್ರಮಾಣಿಕವಾಗಿ ಹೋರಾಟ ಮಾಡಿಕೊಂಡಿದ್ದ ನಾಯಕ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಚ್ಚೆದೆಯ ನ್ಯಾಯಾವಾದಿ ಶ್ರೀ ಸಂಜೀವ ಪುನಳೇಕರರವರನ್ನು ಸಿ.ಬಿ.ಐ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಬಂಧಿಸಿದ ಮಹಾರಾಷ್ಟ್ರ ಸರಕಾರದ ಕ್ರಮವನ್ನು ಖಂಡಿಸಿ ಶ್ರೀ ರಾಮಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್ ನೇತ್ರತ್ವದಲ್ಲಿ ಮಹಾರಾಷ್ಟ್ರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಶ್ರೀ ರಾಮಸೇನಾ ವಿಭಾಗ ಪ್ರಧಾನ ಕಾರ್ಯದರ್ಶಿ ಹರೀಶ್ ಅಮ್ಟಾಡಿ, ಜಿಲ್ಲಾ ಅದ್ಯಕ್ಷ ಪ್ರದೀಪ್ ಮೂಡುಶೆಡ್ಡೆ, ಅರುಣ್ ಕದ್ರಿ, ಹರೀಶ್ ಬೊಕ್ಕಪಟ್ನ, ಕಿಶೋರ್ ನೀರುಮಾರ್ಗ, ವೆಂಕಟೇಶ ಪಡಿಯಾರ್, ಪುರಂದರ್ ಕದ್ರಿ, ಶಿವಾನಂದ್ ನೀರುಮಾರ್ಗ, ರವಿರಾಜ್ ಮೂಡುಶೆಡ್ಡೆ, ಗಣೇಶ ಮೂಡುಶೆಡ್ಡೆ, ಮುಂತಾದವರು ಉಪಸ್ಥಿತರಿದ್ದರು.