Recent Posts

Sunday, January 19, 2025
ಸುದ್ದಿ

ಟಿಕ್‍ಟಾಕ್ ಮಾಡುತ್ತಿದ್ದ ಬೆಂಗಾಲಿ ಚಿತ್ರನಟಿಯರೀಗ ಸಂಸದೆಯರು – ಕಹಳೆ ನ್ಯೂಸ್

ಬೆಂಗಾಲಿ ನಟಿಯರಾದ ಮಿಮಿ ಚಕ್ರವರ್ತಿ ಹಾಗೂ ನುಸ್ರತ್ ಜಹಾನ್ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಈ ಇಬ್ಬರೂ ಸಂಸತ್ ಪ್ರವೇಶಿಸಿದ ಮೊದಲ ದಿನ ತುಂಬಾ ಉತ್ಸಾಹದಿಂದ ಫೋಟೋಗಳನ್ನ ಕ್ಲಿಕ್ಕಿಸಿಕೊಂಡಿದ್ದಾರೆ. ಈಗ ಎಲ್ಲರ ಗಮನ ಈ ಇಬ್ಬರು ಎಂಪಿಗಳ ಮೇಲೆ ಬಿದ್ದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಧವ್‍ಪುರ್‍ ನಿಂದ ಗೆದ್ದಿರೋ ಮಿಮಿ, ಸಂಸತ್ ಭವನದ ಮುಂದೆ ನಿಂತಿರೋ ಫೊಟೋ ಹಂಚಿಕೊಂಡಿದ್ದಾರೆ. ಜೀನ್ಸ್, ವೈಟ್ ಶರ್ಟ್ ಹಾಗೂ ಸ್ನೀಕರ್ಸ್ ಧರಿಸಿರೋ ಮಿಮಿ, ಇದು ಫಿಲ್ಮ್ ಶೂಟಿಂಗ್ ಅಲ್ಲ ಅಂತ ಫೋಟೋಗೆ ಕ್ಯಾಪ್ಷನ್ ಹಾಕಿದ್ದಾರೆ. ಹಾಗೇ ಬಸೀರ್‍ಹಾಟ್‍ನಿಂದ ಗೆದ್ದಿರೋ ನುಸ್ರತ್ ಜಹಾನ್ ಕೂಡ ಪ್ಯಾಂಟ್ ಮತ್ತು ಟಾಪ್ ಧರಿಸಿದ್ದು, ಸಂಸತ್ ಭವನದ ಮುಂದೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಸತ್ ಭವನದಲ್ಲಿ ಮೊದಲ ದಿನ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಈ ಇಬ್ಬರ ಟಿಕ್‍ಟಾಕ್ ವಿಡಿಯೋವನ್ನ ಶೇರ್ ಮಾಡಿರೊ ಬಾಲಿವುಡ್ ನಿರ್ದೇಶಕ ರಾಮ್‍ಗೋಪಾಲ್ ವರ್ಮಾ, ಕಣ್ಣುಗಳಿಗೆ ತಂಪು ನೀಡೋ ಇಂಥ ಎಂಪಿಗಳನ್ನ ನೋಡೋಕೆ ಖುಷಿಯಾಗ್ತಿದೆ ಎಂದಿದ್ದಾರೆ.