Recent Posts

Sunday, January 19, 2025
ಸುದ್ದಿ

ಪೌರ ರಕ್ಷಣಾದಳದ ಡಾ|ಡಿ.ಸಿ ರಾಜಪ್ಪರಿಗೆ ಆರ್ಯಭಟ ಪ್ರಶಸ್ತಿ – ಕಹಳೆ ನ್ಯೂಸ್

ಮಂಗಳೂರು: ಆರಕ್ಷಕ ಉಪಮಹಾನೀರಿಕ್ಷಕರು ಹಾಗೂ ಗೃಹರಕ್ಷಕ ದಳದ ಅಪರ ಮಾಹಾ ಸಮಾದೇಷ್ಠರು ಹಾಗೂ ಪದ ನಿಮಿತ್ತ ಅಪರ ನಿರ್ದೇಶಕರು, ಪೌರ ರಕ್ಷಣಾದಳದ ಡಾ|| ಡಿ.ಸಿ ರಾಜಪ್ಪ ಸೇರಿ 57 ಜನಕ್ಕೆ ಈ ಬಾರಿಯ ಆರ್ಯಭಟ ಪ್ರಶಸ್ತಿ ಲಭಿಸಲಿದೆ.

ಬೆಳಗಾವಿ ನಗರದಲ್ಲಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿ ಸೈ ಎನ್ನಿಸಿಕೊಂಡಿರುವ ಡಾ. ಡಿ.ಸಿ.ರಾಜಪ್ಪ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 57 ಜನ ಆರ್ಯಭಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ನೀಡುವ ಪ್ರಶಸ್ತಿಗೆ ರಾಷ್ಟ್ರ ಅಲ್ಲದೆ ದುಬೈ, ಕತಾರ, ಅಮೆರಿಕಾ, ಕುವೈತ್, ಮಲೇಷಿಯಾ, ಸಿಂಗಾಪುರ, ಆಸ್ಟ್ರೇಲಿಯಾ, ಅಬುದಾಬಿ ರಾಷ್ಟ್ರಗಳ ಸಾಧಕರು ಪ್ರಶಸ್ತಿಗೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮೆ.30ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಗುವುದು ಎಂದು ಆರ್ಯಭಟ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ಎಚ್.ಎಲ್.ಎನ್.ರಾವ್ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಿವೃತ್ತ ನ್ಯಾ.ನಾಗಮೋಹನ ದಾಸ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ದೂರದರ್ಶನದ ಕೇಂದ್ರದ ನಿವೃತ್ತ ಹೆಚ್ಚುವರಿ ಮಹಾನಿರ್ದೇಶಕ ಡಾ.ಮಹೇಶ್ ಜೋಶಿ, ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎಸ್.ಎ. ಚನ್ನೇಗೌಡ, ಆರ್ಯಭಟ ಸಾಂಸ್ಕøತಿಕ ಸಂಸ್ಥೆಯ ಸಂಸ್ಥಾಪಕ, ಅಧ್ಯಕ್ಷ ಡಾ.ಎಚ್.ಎಲ್.ಎನ್.ರಾವ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿರಲಿದ್ದಾರೆ.

ಆರ್ಯಭಟ ಪ್ರಶಸ್ತಿ ಆಯ್ಕೆಯಾದ ಸಾಧಕರು
ಆಡಳಿತ ಮತ್ತು ಸಾಹಿತ್ಯ ಡಾ.ಡಿ.ಸಿ.ರಾಜಪ್ಪ, ವಿಜ್ಞಾನ ಮತ್ತು ತಂತ್ರಜ್ಞಾನ ಡಿಆರ್‍ಡಿಒ ವಿಜ್ಞಾನಿ ಡಾ.ಎನ್.ಪ್ರಭಾಕರನ್, ಬ್ಯಾಂಕಿಂಗ್ ಡಾ. ರಾಜಕಿರಣ ರೈ, ಆಡಳಿತ ಬಸಲಿಂಗಯ್ಯ ಹಿರೇಮಠ, ಜ್ಯೋರ್ತಿಲಿಂಗ ಹೊನಕಟ್ಟಿ, ವೈದ್ಯಕೀಯ ಪ್ರೊ. ರೋಹಿತ ಶೆಟ್ಟಿ, ಡಾ.ವಿನೋದ ಕುಲಕರ್ಣಿ, ಡಾ.ಉಮೇಶ ಪುತ್ರಾನ್, ಲೆಕ್ಕ ಪರಿಶೋಧನೆ ಸಿ.ಎ. ನರಸಿಂಹ ನಾಯಕ, ಮಾಧ್ಯಮ ಡಾ. ನಿರ್ಮಲಾ ಯಲಿಗಾರ, ಸಾಹಿತ್ಯ ಪ್ರೊ. ಬೇಲೂರು ರಘುನಂದನ, ಚಲನಚಿತ್ರ ಸಾಧು ಕೋಕಿಲ, ಕೆ.ಕಲ್ಯಾಣ, ಸುಧಾರಾಣಿ ಸೇರಿದಂತೆ 57 ಸಾಧಕರಿಗೆ ಆರ್ಯಭಟ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ