Sunday, January 19, 2025
ಸುದ್ದಿ

ಉದ್ಯೋಗ ಹುಡುಕುತ್ತಿದ್ದೀರಾ..? “ಗ್ರಾಮೀಣ ಉದ್ಯೋಗ ಮೇಳ”ದಲ್ಲಿ ಭಾಗವಹಿಸಿ ಉದ್ಯೋಗ ಗಿಟ್ಟಿಸಿಕೊಳ್ಳಿ – ಕಹಳೆ ನ್ಯೂಸ್

ಬೆಳ್ತಂಗಡಿ: ಗ್ರಾಮೀಣ ಪ್ರದೇಶದಲ್ಲಿ ಓದಿ ಉದ್ಯೋಗ ಅನ್ವೇಷಣೆಯಲ್ಲಿ ಇರುವ ಯುವ ಸಮುದಾಯಕ್ಕೆ ಸಹಾಯವಾಗುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಹಲವಾರು ಉದ್ಯೋಗ ಮೇಳಗಳು, ನೇರ ಸಂದರ್ಶನಗಳನ್ನು ಆಯೋಜಿಸುತ್ತಿರುವ ವಿದ್ಯಾಮಾತ ಫೌಂಡೇಶನ್ ವತಿಯಿಂದ ಜಯಕರ್ನಾಟಕ ಸಂಘಟನೆಯ ಸಹಕಾರದೊಂದಿಗೆ ದಿನಾಂಕ- 09-06-2019 ಭಾನುವಾರ, ಮಾದರಿ ಹಿರಿಯ ಪ್ರಾರ್ಥಮಿಕ ಶಾಲೆ, ಮುಖ್ಯರಸ್ತೆ, ಬೆಳ್ತಂಗಡಿ ಇಲ್ಲಿ ಗ್ರಾಮೀಣ ಉದ್ಯೋಗ ಮೇಳವನ್ನು ಆಯೋಜಿಸಿದೆ. ಇನ್ನು ಇಲ್ಲಿ ಯಾವುದೇ ನೋಂದಾಣಿ ಶುಲ್ಕ ಇರುವುದಿಲ್ಲ.

ವೈಶಿಷ್ಟ್ಯತೆಗಳು: 2 ರಾಜ್ಯಮಟ್ಟದ ಉದ್ಯೋಗ ಮೇಳ ಮತ್ತು ನೂರಾರು ನೇರ ಸಂದರ್ಶನಗಳ ಮೂಲಕ ಸುಮಾರು 5 ಸಾವಿರಕ್ಕೂ ಮಿಕ್ಕಿದ ಉದ್ಯೋಗಗಳನ್ನು ಕೊಡಿಸಿರುವ ಸಂಸ್ಥೆ, ಬೆಳ್ತಂಗಡಿಯಲ್ಲೂ ಉದ್ಯೋಗ ಮೇಳಗಳು ಮತ್ತು ನೇರ ಸಂದರ್ಶನಗಳ ಮೂಲಕ ಪ್ರತಿ ವರ್ಷ ಕನಿಷ್ಠ 1000 ಉದ್ಯೋಗ ಕೊಡಿಸುವ ಗುರಿ ಹೊಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅರ್ಹತೆಗಳೇನು? 
7 ನೇ ತರಗತಿ/ ಎಸ್.ಎಸ್.ಎಲ್.ಸಿ/ಪಿಯುಸಿ/ಐಟಿಐ/ಡಿಪ್ಲೊಮಾ/ಯಾವುದೇ ಪದವಿ/ಸ್ನಾತಕೋತ್ತರ ಪದವಿ ಓದಿರುವ ಅನುಭವ ಹೊಂದಿರುವ ಅಥವಾ ಅನುಭವ ಹೊಂದಿಲ್ಲದಿರುವ ಎಲ್ಲಾ ಅಭ್ಯರ್ಥಿಗಳಿಗೂ ಅನ್ವಯ.

ಜಾಹೀರಾತು
ಜಾಹೀರಾತು
ಜಾಹೀರಾತು

ಯಾವ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು: IT/Non IT, Retail, Facilities, Civil, Banking, Finance, Manufacturing, Mechanical, Automobile, Hotel management, BPO/KPO, Pharma/Nursing/Medical/ Health care, Back End Office, Front office, Education, Marketing.

ಸಂದರ್ಶನ ಎದುರಿಸುವ ಮಾಹಿತಿ ಕಾರ್ಯಾಗಾರ : ಪ್ರಖ್ಯಾತ ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳಿಂದ ಸಂದರ್ಶನ ಎದುರಿಸುವ ಬಗೆಗಿನ ಕಾರ್ಯಾಗಾರವನ್ನು ಸ್ಥಳದಲ್ಲೇ ಆಯೋಜಿಸಲಾಗಿದೆ.. ಸದ್ಯ ವಿದ್ಯಾಭ್ಯಾಸ ಪಡೆಯುತ್ತಿರುವ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದು.

ಮುಂಚಿತವಾಗಿ ನೋಂದಣಿ ಮಾಡಿಕೊಳ್ಳುವವರು ಬೆಳ್ತಂಗಡಿ ಶಾಖಾ ಕಚೇರಿಯನ್ನು ಸಂಪರ್ಕಿಸ ಬಹುದು : ವಿದ್ಯಾಮಾತ, ಪಿಂಟೋ ಕಾಂಪ್ಲೆಕ್ಸ್, 2ನೆ ಮಹಡಿ, ಮುಖ್ಯರಸ್ತೆ ,ಬೆಳ್ತಂಗಡಿ. (ದ.ಕ) ಮಾಹಿತಿಗಾಗಿ- 8884555792/ 7619264398/ 9148935808 . E-Mail: jobfair@vidyamaatha.org