ಬಂಟ್ವಾಳ: ದ.ಕ.ಜಿಲ್ಲೆಯ ಕಾರ್ಣಿಕ ದೈವಸ್ಥಾನವಾದ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಕನಪ್ಪಾಡಿತ್ತಾಯ ದೈವಸ್ಥಾನದ ಬಸವ ಸುಬ್ಬ(28) ಅಸೌಖ್ಯದಿಂದ ಅಸುನೀಗಿದೆ.
ಈ ಬಸವ ಕಳೆದ 28 ವರ್ಷಗಳಿಂದ ಕಾರಣೀಕ ಕ್ಷೇತ್ರ ಕನಪ್ಪಾಡಿ ದೈವಸ್ಥಾನದ ಸೇವೆಯಲ್ಲಿ ತೊಡಗಿಸಿಕೊಂಡಿತ್ತು. ಕಳ್ಳಿಗೆ, ತುಂಬೆ, ಬಂಟ್ವಾಳ ಮೂಡ, ನಡು ಹೀಗೆ ನಾಲ್ಕು ಗ್ರಾಮಗಳಿಗೆ ಸಂಬಂಧಿಸಿದಂತೆ ಅತ್ಯಂತ ಕಾರಣೀಕ ಕ್ಷೇತ್ರವಾದ ಕನಪ್ಪಾಡಿ ದೈವಸ್ಥಾನದ ಸೇವೆ ಮಾಡುತ್ತಾ ಬಂದಿತ್ತು.
ಆದರೆ ಕಳೆದ ಒಂದು ವರ್ಷಗಳಿಂದ ಈ ಸುಬ್ಬುವಿಗೆ ಆರೋಗ್ಯದಲ್ಲಿ ಸಮಸ್ಯೆ ಉದ್ಭವಿಸುವ ಮೂಲಕ ಕೊನೆಯುಸಿರುಳೆಯಿತು. ಕಳ್ಳಿಗೆ ಗ್ರಾಮದ ಗಾಣದಕೊಟ್ಯ ದಿ.ಮೋನಪ್ಪ ಸಪಲ್ಯ ಅವರ ಮನೆಯಲ್ಲಿ ಸುಬ್ಬನ ವಾಸ ಮತ್ತು ಹಾರೈಕೆಯಾಗಿತ್ತು. ಬಸವ ಸುಬ್ಬನ ಸಾವಿನ ಸುದ್ದಿ ತಿಳಿಯುತ್ತಿದಂತೆ ದೈವಸ್ಥಾನದ ಗುತ್ತಿನ ಮನೆಯವರು, ದೈವ ಪಾತ್ರಿಗಳು, ಚಾಕರಿ ವರ್ಗದವರು, ಹಾಗೂ ಅಪಾರ ಸಂಖ್ಯೆಯಲ್ಲಿ ಊರಿನ ಗ್ರಾಮಸ್ಥರು ಬಂದು ಅಂತಿಮ ದರ್ಶನ ಸಲ್ಲಿಸಿದರು.