Recent Posts

Tuesday, January 21, 2025
ಸುದ್ದಿ

ಧೂಮಪಾನ ಮಾಡಬಾರದು ಆದರೆ ಮಾರಬಹುದಂತೆ! – ಕಹಳೆ ನ್ಯೂಸ್

ಬಸ್ ನಿಲ್ದಾಣ, ಬೇಕರಿ ಬಳಿ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ 2 ಸಾವಿರ ರೂ ದಂಡ ತೆರಬೇಕಾಗುತ್ತದೆ. ಬಸ್ ನಿಲ್ದಾಣ ಇನ್ನಿತರೆ ಕಡೆಗಳಲ್ಲಿ ಧೂಮಪಾನ ಮಾಡುವವರ ಸಂಖ್ಯೆ ಹಿಂದಿನ ದಿನಗಳಿಗೆ ಹೋಲಿಸಿದರೆ ಕೊಂಚ ಕಡಿಮೆ ಆಗಿದೆ. ಆದರೂ ಸಂಪೂರ್ಣವಾಗಿ ಕಡಿಮೆಯಾಗಿಲ್ಲ.

ಧೂಮಪಾನ ತ್ಯಜಿಸಲು ನಿಕೋಟೀನ್ ಬದಲಿ ಚಿಕಿತ್ಸೆ ಈ ಕುರಿತು ರಾಜ್ಯ ತಂಬಾಕು ನಿಯಂತ್ರಣಾಧಿಕಾರಿ ಡಾ. ಶ್ರೀನಿವಾಸ್ ಮಾಹಿತಿ ನೀಡಿದ್ದು, ತಂಬಾಕು ಸೇವನೆಯಿಂದ ಕ್ಯಾನ್ಸರ್ ರೋಗದ ಪ್ರಮಾಣ ಹೆಚ್ಚುತ್ತಿದೆ. ಇದರ ಅರಿವಿದ್ದರೂ ಧೂಮಪಾನ ಬಿಡಲು ಮುಂದಾಗುತ್ತಿಲ್ಲ ಎಂಬುದು ಇವರ ವಾದ. ಆದರೆ ಧೂಮಪಾನದಿಂದ ಕ್ಯಾನ್ಸರ್‍ನಂತಹ ಭೀಕರ ಖಾಯಿಲೆಗೆ ಒಳಗಾಗುಗುವುದು ಸ್ಪಷ್ಟವಾಗಿ ತಿಳಿದಿದ್ದರೂ ಸಿಗರೇಟ್ ಉತ್ಪನ್ನಗಳ ಮಾರಾಟ ಮತ್ತು ಉತ್ಪಾದನೆಗೆ ಯಾಕೆ ಕಡಿವಾಣ ಹಾಕುವುದಿಲ್ಲ ಎಂಬುದೇ ಸರಳ ಪ್ರಶ್ನೆಯಾಗಿ ಪ್ರಜ್ಞಾವಂತ ನಾಗರಿಕರನ್ನು ಕಾಡುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಉಲ್ಲಂಘನೆ ಮಾಡಿದರೆ ದಂಡವನ್ನು ಹೆಚ್ಚಿಸುವ ಕುರಿತು ನಿರ್ಧಾರ ಕೈಗೊಂಡ ಇವರು ಇದರ ಮಾರಾಟ ಮತ್ತು ಉತ್ಪಾದನೆಯ ನಿಷೇಧಕ್ಕೆ ಯಾಕೆ ನಿರ್ಧಾರವನ್ನು ಕೈಗೊಳ್ಳುತ್ತಿಲ್ಲ ಎಂಬುವುದೇ ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು