Tuesday, January 21, 2025
ಸುದ್ದಿ

ನೇತ್ರಾವತಿಯ ನದಿ ತುಂಬೆ ಡ್ಯಾಂನಲ್ಲಿ ಭರದಿಂದ ಸಾಗುತ್ತಿದೆ ಪ್ರಾಯೋಗಿಕ ಹೂಳೆತ್ತುವ ಕಾರ್ಯ – ಕಹಳೆ ನ್ಯೂಸ್

ಬಂಟ್ವಾಳ : ನೇತ್ರಾವತಿ ನದಿ ತುಂಬೆ ಡ್ಯಾಂ ವಠಾರದಲ್ಲಿ ನೀರಿನ ಮಟ್ಟ ಗಣನೀಯವಾಗಿ ಕುಸಿತವಾಗಿದ್ದು ನದಿಯಲ್ಲಿ ಸೇರಿರುವ ಹೂಳೆತ್ತುವ ಪ್ರಾಯೋಗಿಕ ಕೆಲಸಕ್ಕೆ ವ್ಯವಸ್ಥೆ ಸಿದ್ಧವಾಗಿದ್ದು ಮೇ 27ರಂದು ಸಂಜೆ ಡ್ರಜ್ಜಿಂಗ್ ಯಂತ್ರವನ್ನು ನೀರಿಗೆ ಇಳಿಸಲಾಗಿದೆ.

ದೆಹಲಿಯ ನೆಲ್ಕೊ ಕಂಪೆನಿ ಹೂಳೆತ್ತುವ ಗುತ್ತಿಗೆ ಪಡೆದಿದ್ದು ಉಪಗುತ್ತಿಗೆಯನ್ನು ಮಂಗಳೂರಿನ ಖಾಸಗಿ ವ್ಯಕ್ತಿಗಳ ಗುಂಪು ಆಸೀಪ್ ನೇತೃತ್ವದಲ್ಲಿ ವಹಿಸಿಕೊಂಡಿದೆ.ಹೂಳೆತ್ತುವುದಕ್ಕೆ ಈಗಾಗಲೇ 25 ಟನ್ ಭಾರವನ್ನು ಹೊರುವ ಸಾಮಥ್ರ್ಯದ ಪಂಟೂನ್ ತೇಲುವ ಗೋಲಗಳನ್ನು ನೀರಲ್ಲಿ ಸ್ಥಾಪಿಸಲಾಗಿದೆ. ಡ್ರಜ್ಜಿಂಗ್ ಪಂಪನ್ನು ಅಳವಡಿಸಿ, ಪೈಪ್‍ಲೈನ್‍ಗಳ ಮೂಲಕ ನದಿಯಲ್ಲಿ ತುಂಬಿರುವ ಮರಳು ಮಣ್ಣು ಕಸವನ್ನು ಮೇಲೆತ್ತುವುದಕ್ಕೆ ಸಿದ್ಧತೆಗಳು ನಡೆದಿದೆ. ಯಂತ್ರಗಳ ಚಾಲನೆಗೆ ವಿದ್ಯುತ್ ಸಂಪರ್ಕವನ್ನು ಬಳಸಿಕೊಂಡಿದ್ದು ಅಲ್ಲದೆ 125 ಕೆ.ವಿ. ಅಶ್ವಶಕ್ತಿಯ ಜನರೇಟರನ್ನು ಸ್ಥಳದಲ್ಲಿ ಇರಿಸಿಕೊಂಡಿದ್ದು ಯಾವುದೇ ಸಂದರ್ಭ ವಿದ್ಯುತ್ ನಿಲುಗಡೆ ಆದರೂ ಯಂತ್ರಗಳು ನಿಲ್ಲದಂತೆ ವ್ಯವಸ್ಥೆಗಳನ್ನು ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿ ಅಳವಡಿಸಿರುವ ಡ್ರಜ್ಜಿಂಗ್ ಯಂತ್ರವು ಗಂಟೆಗೆ 100 ಎಂ.ಕ್ಯೂ.( ಕ್ಯುಬಿಕ್ ಮೀಟರ್) ಹೂಳನ್ನು ಮೇಲೆತ್ತಿ ಹಾಕುವುದು. ಹೂಳನ್ನು ಸಂಗ್ರಹಿಸುವುದಕ್ಕಾಗಿ ನಾಲ್ಕು ಎಕ್ರೆ ವಿಶಾಲ ಪ್ರದೇಶವನ್ನು ವ್ಯವಸ್ಥೆಯ ನಿರ್ವಾಹಕರು ಕಾದಿರಿಸಿಕೊಂಡಿದ್ದಾಗಿ ತಿಳಿಸಿದ್ದಾರೆ.ಹೂಳು ತೆಗೆಯುವ ಕೆಲಸ ನಿರ್ವಹಣೆ ತಂತ್ರಜ್ಞರು ವಿವಿಧ ಬಂದರುಗಳಲ್ಲಿ ಸಾಕಷ್ಟು ವರ್ಷಗಳಿಂದ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದು ಒರಿಸ್ಸಾ ಮತ್ತು ಕೊಚ್ಚಿನ್‍ನಲ್ಲಿ ಸತತವಾಗಿ ಕೆಲಸ ನಿರ್ವಹಿಸಿದ ಅನುಭವಸ್ಥರೆಂದು ವಿವರಿಸಿದ್ದಾರೆ. ಈಗಾಗಲೇ ಪಣಂಬೂರು ಬಂದರಿನಲ್ಲಿ ಹೂಳೆತ್ತುವ ಕೆಲಸ ಮಾಡುತ್ತಿದ್ದು ಅಲ್ಲಿಂದ ತುಂಬೆ ಡ್ಯಾಂಗೆ ಶಿಪ್ಟಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಥಮವಾಗಿ ಹೂಳೆತ್ತುವ ಡೆಮೋವನ್ನು ಚಿತ್ರೀಕರಿಸಿ ಜಿಲ್ಲಾಧಿಕಾರಿ ಮತ್ತು ಗಣಿ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಲಾಗುತ್ತದೆ. ಅವರು ವೀಕ್ಷಿಸಿ ಬಳಿಕ ಅನುಮತಿ ನೀಡಿದ ನಂತರ ಅಧಿಕೃತವಾಗಿ ಕೆಲಸ ಆರಂಭಿಸಲಾಗುತ್ತದೆ. ವಾರದ ಹಿಂದೆ ಗಣಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದಾರೆ. ಇ ಟೆಂಡರ್ ಮೂಲಕ ಕೆಲಸದ ಗುತ್ತಿಗೆಯನ್ನು ವಹಿಸಿದೆ. ಡೆಮೋ ವೀಕ್ಷಣೆ ಬಳಿಕ ಅಂತಿಮ ಆದೇಶ ಸಿಕ್ಕಿದ ನಂತರ ಕೆಲಸ ನಡೆಯುವುದಾಗಿ ತಿಳಿಸಿದ್ದಾರೆ.