Tuesday, January 21, 2025
ಸುದ್ದಿ

ಧೂಮಚಡವು ಕೊಲೆ ಪ್ರಕರಣ: ಮಂಗಳೂರು ಪೊಲೀಸರಿಂದ ಯಶಸ್ವಿ ಕಾರ್ಯಾಚರಣೆ – ಕಹಳೆ ನ್ಯೂಸ್

ಮಂಗಳೂರು: ಬಜಪೆ ಪೊಲೀಸ್ ಠಾಣಾ ಸರಹದ್ದಿನ ಬಡಗ ಎಡಪದವು ಗ್ರಾಮದ, ಧೂಮಚಡವು ಬಸ್ ಸ್ಟ್ಯಾಂಡ್ ಬಳಿ ನಡೆದಿದ್ದ ಕೊಲೆ ಪ್ರಕರಣವನ್ನ ಬೇದಿಸುವಲ್ಲಿ ಮಂಗಳೂರು ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳದ ಯಶಸ್ವಿಯಾಗಿದೆ.

ದಿನಾಂಕ 17-05-19 ರಂದು ರಾತ್ರಿ 11-50 ಗಂಟೆ ಸುಮಾರಿಗೆ ಧೂಮಚಡುವಿನ ರಮೇಶ ಪೊಂಗು ಹಾಗೂ ನಿತ್ಯಾನಂದ ಡುಬ್ಲಿ ಎಂಬವರು ಅದೇ ಗ್ರಾಮದ ನವೀನ (28), ಎಂಬಾತನನ್ನು ಹಣಕಾಸಿನ ವಿಚಾರ ಅಥವಾ ಇನ್ಯಾವುದೋ ವೈಶಮ್ಯವನ್ನಿಟ್ಟುಕೊಂಡು ಮಾರಕಾಯುಧವಾದ ಮರದ ದೊಣ್ಣೆಗಳಿಂದ ತಲೆಗೆ ಹಾಗೂ ಶರೀರಕ್ಕೆ ಹೊಡೆದು ಕೊಲೆ ಮಾಡಿ ನಂತರ ಆರೋಪಿಗಳಿಬ್ಬರು ಅಲ್ಲಿಂದ ಓಡಿ ತಪ್ಪಿಸಿಕೊಂಡಿರುತ್ತಾರೆ. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಅ.ಕ್ರ. 108/2019 ಕಲಂ: 302, 34 ಐ.ಪಿ.ಸಿ ಯಂತೆ ಪ್ರಕರಣ ದಾಖಸಿಕೊಂಡು ಅರೋಪಿಗಳತ್ತ ಬಲೆ ಬೀಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಎರಡು-ಮೂರು ತಂಡಗಳನ್ನು ರಚಿಸಲಾಗಿತ್ತು. ಈ ಪ್ರಕರಣದ ಪತ್ತೆ ಕಾರ್ಯದಲ್ಲಿರುವ ಸಮಯ ದೊರೆತ ಖಚಿತ ಮಾಹಿತಿ ಮೇರೆಗೆ ಮಂಗಳೂರು ಉತ್ತರ ಉಪ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಶ್ರೀನಿವಾಸ ಗೌಡ, ಐ.ಪಿ.ಎಸ್ ರವರ ನೇತೃತ್ವದ ಉತ್ತರ ಉಪ ವಿಭಾಗದ ರೌಡಿ ನಿಗ್ರಹ ದಳದ ಅಧಿಕಾರಿ/ಸಿಬ್ಬಂದಿಗಳು ದಿನಾಂಕ: 28-05-2019 ರಂದು ಉಡುಪಿ ಜಿಲ್ಲೆಯ, ಪಲಿಮಾರು ಗ್ರಾಮದಲ್ಲಿ ಪ್ರಕರಣದ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವೀಯಾಗಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಮೃತ ನವೀನ ಆರೋಪಿ ನಿತ್ಯಾನಂದನಿಂದ ಸಾಲವಾಗಿ ಪಡೆದುಕೊಂಡಿದ್ದ ರೂ 20,000 ಗಳನ್ನು ವಾಪಾಸು ಕೂಡದೇ ಸತಾಯಿಸುತ್ತಿದ್ದನೆಂಬ ಕಾರಣವನ್ನಿಟ್ಟುಕೊಂಡು ಕೊಲೆಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿರುತ್ತಾರೆ. ಈ ಪ್ರಕರಣದ ಆರೋಪಿ ರಮೇಶ ಪೊಂಗು ಇತನು ಬಜಪೆ ಠಾಣೆಯ ರೌಡಿ ಅಸಾಮಿಯಾಗಿದ್ದು, ಈತನ ವಿರುದ್ದ ಈ ಹಿಂದೆ 2 ಪ್ರಕರಣಗಳು ದಾಖಲಾಗಿರುತ್ತವೆ.

ಈ ಪ್ರಕರಣದ ಪತ್ತೆ ಕಾರ್ಯವು ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್, ಐ.ಪಿ.ಎಸ್. ರವರ ನಿರ್ದೇಶನದಂತೆ, ಮಾನ್ಯ ಉಪ ಪೊಲೀಸ್ ಆಯುಕ್ತ ಹನುಮಂತರಾಯ ಹಾಗೂ ಅನೇಕ ಪೊಲೀಸ್ ಸಿಬ್ಬಂದಿಗಳ ಪರಿಶ್ರಮದಿಂಧ ನಡೆದಿರುತ್ತದೆ.