Tuesday, January 21, 2025
ಸುದ್ದಿ

ನೇತ್ರಾವತಿ ನದಿ ದಡದಲ್ಲಿ 8 ತಿಂಗಳ ಮಗುವಿನ ಶವ ಪತ್ತೆ – ಕಹಳೆ ನ್ಯೂಸ್

ಮಂಗಳೂರಿನ ನೇತ್ರಾವತಿ ನದಿ ದಡದಲ್ಲಿ 8 ತಿಂಗಳ ಮಗುವಿನ ಶವ ಪತ್ತೆಯಾಗಿದೆ.

ಕೊಪ್ಪಳ ಜಿಲ್ಲೆಯ ಕಾರ್ಮಿಕ ದಂಪತಿಗಳಾದ ಲಕ್ಷ್ಮಣ ತೆಂಗಿನಹಾಳ, ರೂಪಾ ದಂಪತಿಯ ಮಗು ಮೌನಶ್ರೀ ಎಂದು ತಿಳಿದು ಬಂದಿದೆ. ಮಗುವಿನ ಮುಖದ ಮೇಲೆ ತರಚಿದ ಗಾಯಗಳು ಪತ್ತೆಯಾಗಿದ್ದು ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಬೋಳಾರದ ಎಂಫಾರ್ ಕ್ಯಾಂಪ್ ಶೆಡ್‍ನಲ್ಲಿ ನೆಲೆಸಿರುವ ದಂಪತಿ ಕಟ್ಟಡ ನಿರ್ಮಾಣದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಮಗುವನ್ನು ಮನೆಯಲ್ಲೇ ಬಿಟ್ಟು ಕೆಲಸಕ್ಕೆ ತೆರಳಿದ್ದ ದಂಪತಿ ಮಧ್ಯಾಹ್ನ ವಾಪಸ್ ಬರುವಷ್ಟರಲ್ಲಿ ಮಗು ನಾಪತ್ತೆಯಾಗಿತ್ತು . ಈ ಬಗ್ಗೆ ಮಂಗಳೂರು ದಕ್ಷಿಣ ಠಾಣೆ ಪೊಲೀಸರಿಂದ ತನಿಖೆ ಪ್ರಾರಂಭಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು