ಮಂಗಳೂರು : ಪೊಲೀಸರ ಮೇಲೆ ಅಟ್ಯಾಕ್ ಮಾಡಿದ ರೌಡಿ ಮೇಲೆ ಗುಂಡಿನ ದಾಳಿ ಮಾಡಿ ರೌಡಿಯನ್ನು ಬಂಧಿಸಿದ ಘಟನೆ ಮಂಗಳೂರಿನ ಪಚ್ಚನಾಡಿಯಲ್ಲಿ ನಡೆದಿದೆ.
ಉಮರ್ ಫಾರೂಕ್ ಬಂಧಿತ ಆರೋಪಿ. ಉಮರ್ ಫಾರೂಕ್‍ನನ್ನು ಬಂಧಿಸಲು ಮುಂದಾದಾಗ ಆತ ಪೊಲೀಸರ ಮೇಲೆ ಅಟ್ಯಾಕ್ ಮಾಡಲು ಮಂದಾದ. ಈ ಸಮಯದಲ್ಲಿ ಪೊಲೀಸರು ರೌಡಿ ಮೇಲೆ ಗುಂಡಿನ ದಾಳಿ ಮಾಡಿ ಆತನನ್ನು ಬಂಧಿಸಿದ್ದಾರೆ. ಘಟನೆಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಸಂದೀಪ್ ಎಂಬವರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಬಂಧಿತ ಆರೋಪಿ ತನ್ನ ಬಾವ ರೌಡಿ ಟಾರ್ಗೆಟ್ ಇಲ್ಯಾಸ್ ಹಂತಕ ಶಮೀರ್ ಹತ್ಯೆಗೆ ಪಿತೂರಿ ನಡೆಸಿದ್ದು ಎರಡು ಪ್ರಕರಣದಲ್ಲಿ ಪೊಲೀಸರಿಗೆ ಈತನ ಹುಡುಕಾಟದಲ್ಲಿದ್ದರು, ಇದೀಗ ಉಮರ್ ಫಾರೂಕ್ ಪೊಲೀಸರ ಅಥಿತಿಯಾಗಿದ್ದಾನೆ.