Monday, January 20, 2025
ರಾಜಕೀಯಸುದ್ದಿ

ಸಚಿವ ಸ್ಥಾನ ನಿರಾಕರಿಸಿ ಅರುಣ್ ಜೇಟ್ಲಿಯಿಂದ ಮೋದಿಗೆ ಮನವಿ – ಕಹಳೆ ನ್ಯೂಸ್

ನೂತನ ಸರ್ಕಾರದಲ್ಲಿ ನನಗೆ ಯಾವುದೇ ಜವಾಬ್ದಾರಿ ನೀಡಬೇಡಿ. ಎನ್‍ಡಿಎ ಸರ್ಕಾರದಲ್ಲಿ ಸಚಿವನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಪ್ರಸ್ತುತ ನನಗೀಗ ವಿಶ್ರಾಂತಿಯ ಅಗತ್ಯವಿದೆ. ಈ ಬಾರಿ ಸಂಪುಟ ಸೇರಲು ನಾನು ಅಸಹಾಯಕನಾಗಿದ್ದೇನೆ ಎಂದು ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬುಧವಾರ ಪತ್ರ ಬರೆದು ವಿನಂತಿಸಿಕೊಂಡಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದು, ಇದಕ್ಕೂ ಮುನ್ನ ಜೇಟ್ಲಿ ಅವರು ಈ ಪತ್ರ ಬರೆದಿದ್ದಾರೆ. ಪಕ್ಷ ನನಗೆ ಪ್ರತಿಬಾರಿ ಜವಾಬ್ದಾರಿಯನ್ನು ನೀಡಿ ಆಶೀರ್ವದಿಸಿದೆ. ಮೊದಲ ಬಾರಿ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗ, ಪಕ್ಷ ಸಂಘಟನೆ, ವಿರೋಧ ಪಕ್ಷದಲ್ಲಿದ್ದಾಗಲೂ ನನಗೆ ಜವಾಬ್ದಾರಿ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಗ್ಯ ಮತ್ತು ಟ್ರೀಟ್ ಮೆಂಟ್ ಗೆ ಹೆಚ್ಚಿನ ಗಮನ ಕೊಡಬೇಕಾದ ಹಿನ್ನೆಲೆಯಲ್ಲಿ ನೂತನ ಬಿಜೆಪಿ ಸರ್ಕಾರದಲ್ಲಿ ತನಗೆ ಯಾವುದೇ ಸಚಿವ ಸ್ಥಾನ ನೀಡದಂತೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಜೇಟ್ಲಿ ಅವರು ಪತ್ರದ ಮೂಲಕ ವಿನಂತಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು