
ಬೇಸಿಗೆ ರಜೆಯ ನಂತರ ಈಗಾಗಲೇ ಕೆಲವು ಶಾಲೆಗಳು ಪ್ರಾರಂಭ ಆಗಿವೆ. ಜೂನ್ 1ಕ್ಕೆ ಇನ್ನಷ್ಟು ಶಾಲೆಗಳು ಶುರು ಆಗುತ್ತಿವೆ. ಈ ರೀತಿ ಶಾಲೆಗೆ ಬರುವ ಮಕ್ಕಳಿಗೆ ಜಗ್ಗೇಶ್ ಪತ್ನಿ ಪರಿಮಳ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.
ಓದಬೇಕು ಎನ್ನುವ ಆಸೆ ಇರುವ ಎಷ್ಟೋ ಮಕ್ಕಳಿಗೆ ಒಂದೇ ಒಂದು ಪುಸ್ತಕ, ಪೆನ್ ಕೊಂಡುಕೊಳ್ಳಲು ಹಣ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಅವರ ಸಹಾಯಕ್ಕೆ ಪರಿಮಳ ಜಗ್ಗೇಶ್ ಮುಂದಾಗಿದ್ದಾರೆ. ನಟ ಜಗ್ಗೇಶ್ ಜೀವನವನ್ನೇ ಬದಲಿಸಿತ್ತು 1984 ಮಾರ್ಚ್ 22 ಪರಿಮಳ ಜಗ್ಗೇಶ್ 300 ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಪುಸ್ತಕ, ಪೆನ್ನು, ಪೆನ್ಸಿಲ್, ರಬ್ಬರ್ ವಿತರಣೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಜಗ್ಗೇಶ್ ಧಾನಗಳಲ್ಲಿ ಶ್ರೇಷ್ಟ ದಾನ ವಿಧ್ಯಾದಾನ ಎಂದಿದ್ದಾರೆ. ಜಗ್ಗೇಶ್ ಪತ್ನಿಯ ಈ ಕಾರ್ಯಕ್ಕೆ ಅಭಿಮಾನಿಗಳ ಮೆಚ್ಚಿಗೆ ಸಿಗುತ್ತಿದೆ. ಒಬ್ಬ ಸ್ಟಾರ್ ಪತ್ನಿಯಾಗಿ ಸುಮ್ಮನೆ ಕೂರದೆ ಈ ರೀತಿಯ ಕೆಲಸ ಮಾಡುತ್ತಿರುವುದು ಒಳ್ಳೆಯದು ಎಂದಿದ್ದಾರೆ.