ಹಿಂದೂ ಕಾರ್ಯರ್ತರ ಹತ್ಯೆ ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿಯಿಂದ ಪುತ್ತೂರಿನಲ್ಲಿ ಬೃಹತ್ ಪ್ರತಿಭಟನಾ ಸಭೆ – ಮುರಳಿಕೃಷ್ಣ ಹಸಂತಡ್ಕ
ಪುತ್ತೂರು : ರಾಜ್ಯದಲ್ಲಿ ನಡೆಯುತ್ತಿರುವ ಹಿಂದು ಸಂಘಟನೆಗಳ ಕಾರ್ಯಕರ್ತರ ಹತ್ಯೆಗೆ ರಾಜ್ಯ ಸರಕಾರ ನೇರ ಬೆಂಬಲ ನೀಡುವುದನ್ನು ವಿರೋಧಿಸಿ ಹಾಗೂ ಹೋನ್ನಾವರ ದ ಹಿಂದು ಕಾರ್ಯಕರ್ತ ಪರೇಶ್ ಮೇಸ್ತ ಹತ್ಯೆ ಖಂಡಿಸಿ ಬ್ರಹತ್ ಪ್ರತಿಭಟನೆಯು ಮಿನಿವಿಧಾನ ಸೌಧ ಪುತ್ತೂರು ಇದರ ಮುಂಭಾಗ ನಡೆಯಲಿದೆ.
ಇದೇ ಬರುವ ತಾರೀಕು 19/12/2017 ನೇ ಮಂಗಳವಾರ ಬೆಳಿಗ್ಗೆ ಸಮಯ 10.30 ಕ್ಕೆ ಸರಿಯಾಗಿ ಹಿಂದು ಹಿತರಕ್ಷಣಾ ಸಮಿತಿಯ
ಆಶ್ರಯದಲ್ಲಿ ಪ್ರತಿಭಟನೆಯು ನಡೆಯಲಿದ್ದು ಈ ಪ್ರತಿಭಟನಾ ಸಭೆಗೆ ಸಮಸ್ತ ಹಿಂದು ಭಾಂಧವರು ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿಸುವ ಬಜರಂಗದಳದ ಪ್ರಾಂತ ಸುರಕ್ಷಾ ಪ್ರಮುಖ್ ಮುರಳಿಕೃಷ್ಣ ಹಸಂತಡ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.