
ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ನಾಯಕ ಜಗನ್ ಮೋಹನ್ ರೆಡ್ಡಿ ಅವರು ಗುರುವಾರ ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿಲಿದ್ದಾರೆ. ಬುಧವಾರ ಸಮಾರಂಭ ನಡೆಯಬೇಕಾದ ಮೈದಾನದಲ್ಲಿ ಭಾರೀ ಗಾಳಿ ಮಳೆಸುರಿದು ಅವಾಂತರಗಳನ್ನು ಸೃಷ್ಟಿಸಿದೆ.
ಐಜಿಎಂಸಿ ಮೈದಾನದಲ್ಲಿ ಅಳವಡಿಸಲಾಗಿದ್ದ ಶಾಮಿಯಾನ, ಕಟೌಟ್‍ಗಳು ಗಾಳಿಗೆ ಹಾರಿ ಹೋಗಿವೆ. ಮೈದಾನದ ಸುತ್ತಮುತ್ತ ರಸ್ತೆಗಳು ಕೆಸರು ಗೆದ್ದೆಯಂತಾಗಿ ಪರದಾಡಬೇಕಾಗಿದೆ.
46 ರ ಹರೆಯದ ಜಗನ್ ಅವರು ಮಧ್ಯಾಹ್ನ 12.23 ಕ್ಕೆ ಮೊದಲ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯಪಾಲ ಇಎಸ್‍ಎಲ್ ನರಸಿಂಹನ್ ಅವರು ಜಗನ್ ಅವರಿಗೆ ಪ್ರಮಾಣ ವಚನಬೋಧಿ ಸಲಿದ್ದಾರೆ.
ಇಂದು ಜಗನ್ ಮಾತ್ರ ಪ್ರಮಾಣ ವಚನಸ್ವೀಕರಿಸಲಿದ್ದು, ಸಂಪುಟ ಸದಸ್ಯರು ಜೂನ್ 7ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ವೈಎಸ್‍ಆರ್ ಪಕ್ಷದಮೂಲಗಳು ತಿಳಿಸಿವೆ.