
ಮಂಡ್ಯದಲ್ಲಿ ನಿನ್ನೆ ನಡೆದ ಸ್ವಾಭಿಮಾನಿಗಳ ವಿಜಯೋತ್ಸವದಲ್ಲಿ ರಾಕಿಂಗ್ ಸ್ಟಾರ್ ಯಶ್ ಮಂಡ್ಯ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅವತ್ತೇ ಹೇಳಿದ್ದೆ ಅಂಬ್ರೀಶ್ ಅಣ್ಣನ ಹುಟ್ಟುಹಬ್ಬಕ್ಕೆ 23ಕ್ಕೆ ಮಂಡ್ಯ ಜನ ಗಿಫ್ಟ್ ಕೊಡ್ತಾರೆ ಅಂತ ಆ ಮಾತು ನಿಜವಾಗಿದೆ. ಅಂಬರೀಶ್ ಅವರು ಯಾವಾಗಲು ಮಂಡ್ಯದ ಗಂಡು ಎಂದು ಯಶ್ ಹೇಳಿದ್ದಾರೆ.
ಇಷ್ಟು ದೊಡ್ಡ ಗೆಲುವು ಕೊಟ್ಟಿರುವ ಮಂಡ್ಯದ ಜನತೆಗೆ ಯಾವ ರೀತಿ ಕೃತಜ್ಞತೆ ಸಲ್ಲಿಸಬೇಕು ಎಂದು ಗೊತ್ತಾಗುತ್ತಿಲ್ಲ. ದರ್ಶನ್ ಹೇಳಿದ ಹಾಗೆ ಚರ್ಮ ತೆಗೆದು ಚಪ್ಪಲಿ ಮಾಡಿಕೊಟ್ರು ಸಾಲದು ಎಂದು ಹೇಳುವ ಮೂಲಕ ದರ್ಶನ್ ಮಾತನ್ನು ಮತ್ತೊಮ್ಮೆ ನೆನಪಿಸಿದ್ರು ಯಶ್.
ಸುಮಮ್ಮನ ಹೋರಾಟ ಸಾಮಾನ್ಯಾ ಆಗಿರಲ್ಲಿಲ್ಲ. ಆದ್ರೆ ಮಂಡ್ಯದ ಜನತೆಗೆ ಅಂಬಿ ಅಣ್ಣನ ಬಗ್ಗೆ ಗೊತ್ತಿತ್ತು. ಹಾಗಾಗಿ ಗೆಲ್ಲಿಸಿಕೊಟ್ಟಿದ್ದಾರೆ, ಈಗಾಗಲೆ ಜನ ಪಾಠ ಕಲಿಸಿದ್ದಾರೆ. ಮತ್ತೆ ಮತ್ತೆ ಆ ತಪ್ಪುಗಳನ್ನು ಮಾಡಬೇಡಿ. ನಾವ್ಯಾರು ವಿರೋಧಿಗಳಲ್ಲ. ದ್ವೇಷ ರಾಜಕಾರಣ ಬೇಡ ಎಂದು ಕಿವಿ ಮಾತು ಹೇಳುತ್ತಲೆ ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ ಅಣ್ತಮ್ಮ ಯಶ್.