Recent Posts

Sunday, April 13, 2025
ಸುದ್ದಿ

ಇಂದು ಗುಜರಾತ್ ನಾಳೆ ಕರ್ನಾಟಕ | ರಾಜ್ಯದಲ್ಲಿ ಬಿಜೆಪಿ ಗೆಲುವಿನ ಮುನ್ನುಡಿ – ಅಶೋಕ್ ಕುಮಾರ್ ರೈ

 

ಮಂಗಳೂರು: ಭಾರೀ ನಿರೀಕ್ಷೆ ಮೂಡಿಸಿದ್ದ ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದು, ಕ್ಷಣಕ್ಷಣದಲ್ಲಿಯೂ ಭಾರೀ ಏರಿಳಿತ ಕಂಡುಬರುತ್ತಿದೆ. ಈಗ ಹೊರಬರುತ್ತಿರುವ ಫಲಿತಾಂಶದ ಪ್ರಕಾರ ಬಹುತೇಕ ಬಿಜೆಪಿ ತನ್ನ ಸ್ಥಾನವನ್ನು ಕಾಯ್ದುಕೊಂಡಿದೆ. ಬಿಜೆಪಿ ಗೆಲುವಿನೆಡೆಗೆ ಮುಖ ಮಾಡುತ್ತಿದ್ದಂತೆ ಕಹಳೆ ನ್ಯೂಸ್ ಗೆ ಪುತ್ತೂರಿನ ಬಿಜೆಪಿ ಮುಖಂಡರು, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಅಶೋಕ್ ಕುಮಾರ್ ರೈ ಹೇಳಿಕೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇವತ್ತು ಹಿಮಾಚಲ ಪ್ರದೇಶ ಮತ್ತು ಗುಜರಾತ್ ನಾಳೆ ಕರ್ನಾಟಕ, ಗೆಲುವು ನಮ್ಮದೇ, ಅಭಿವೃದ್ಧಿ, ನರೇಂದ್ರ ಮೋದಿಯವರ ಆಡಳಿತ ದೇಶದ ಜನ ಮೆಚ್ಚಿಕೊಂಡಿದ್ದಾರೆ. ನೂರಕ್ಕೆ ನೂರು ವಿಶ್ವಾಸವಿದೆ ರಾಜ್ಯದಲ್ಲಿ ಮಿಷನ್ 150 ಗುರಿಯನ್ನು ತಲುಪಿಯೇ ತಲುವುತ್ತೇವೆ, ಜನಪರ ಆಡಳಿತ, ರೈತರ ಬಡವರ ನೋವಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತೇವೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಫಲಿತಾಂಶ ರಾಜ್ಯದ ಚುನಾವಣೆಗೆ ಮುನ್ನುಡಿ ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ