Recent Posts

Sunday, January 19, 2025
ಸುದ್ದಿ

ಫರಂಗಿಪೇಟೆ ಕಡೆಗೋಳಿ ಚೌಟ ಗ್ಯಾಸ್ ಏಜೆನ್ಸಿಯಲ್ಲಿ ಕಳವು ಆರೋಪಿ ಬಂಧನ – ಕಹಳೆ ನ್ಯೂಸ್

ಬಂಟ್ವಾಳ : ಫರಂಗಿಪೇಟೆ ಕಡೆಗೋಳಿ ಚೌಟ ಇಂಡೇನ್ ಗ್ಯಾಸ್ ಏಜನ್ಸಿ ಕಚೇರಿಯಲ್ಲಿ ಜ. 10ರಂದು ಕಳೆದ ಐದು ತಿಂಗಳ ಹಿಂದೆ ಕಳವು ಮಾಡಿದ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿದಿಸಲಾಗಿದೆ.

ಆರೋಪಿಯನ್ನು ಮೂಡಬಿದಿರೆ ನಿವಾಸಿ ಪ್ರಸಾದ್ ಪೂಜಾರಿ (28) ಎಂದು ಗುರುತಿಸಲಾಗಿದೆ. ಬಾಲ್ಯದಿಂದಲೇ ಕಳವು ಹವ್ಯಾಸ ಮೈಗೂಡಿಸಿಕೊಂಡಿದ್ದ ಆತ ಹಲವಾರು ಕಡೆಗಳಲ್ಲಿ ಕಳವು ನಡೆಸಿ, ಒಂದು ಪ್ರಕರಣದಲ್ಲಿ ಮೂರು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಿದ್ದ.

ಜಾಹೀರಾತು
ಜಾಹೀರಾತು
ಜಾಹೀರಾತು

ತೊಕ್ಕೊಟ್ಟಿನ ಲಾಡ್ಜ್ ಒಂದರಲ್ಲಿ ಕೆಲವು ದಿನಗಳ ಹಿಂದೆ ರೂಂ ಮಾಡಿದ್ದ ಆರೋಪಿ ಹೊರ ಹೋದವನು ನಾಲ್ಕೈದು ದಿನಗಳಿಂದ ರೂಮಿಗೆ ಬಾರದೆ ಕೀ ಹಿಂತಿರುಗಿಸದ ಕಾರಣ ಲಾಡ್ಜ್ ನಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರ ಉಪಸ್ಥಿತಿಯಲ್ಲಿ ಬಾಗಿಲು ತೆರೆಸಿ ಪರಿಶೀಲನೆ ಮಾಡಿದಾಗ ದೊರೆತ ಹಲವಾರು ಮೊಬೈಲ್, ಪೆನ್‍ಡ್ರೈವ್‍ಗಳನ್ನು ತಪಾಸಣೆ ಮಾಡಿದಾಗ ಈತ ಕಳವು ಪ್ರಕರಣದಲ್ಲಿ ಶಿಕ್ಷೆ ಪಡೆದ ಆರೋಪಿ ಎಂದು ಗುರುತಿಸಲಾಗಿತ್ತು.
ಕೆಲವು ದಿನ ಬಿಟ್ಟು ಈ ಸಾಮಾಗ್ರಿಗಳನ್ನು ಕೊಂಡು ಹೋಗಲು ಆರೋಪಿಯು ಲಾಡ್ಜ್ ಗೆ ಬಂದಾಗ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು ಬಂಧನಕ್ಕೆ ಕಾರಣವಾಗಿತ್ತು. ಕಂಕನಾಡಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾಗ ಚೌಟ ಗ್ಯಾಸ್‍ನಲ್ಲಿ ನಡೆಸಿದ ಕಳವು, ಮಂಗಳೂರು ಪಡೀಲ್ ಟೊಯೋಟ ಕಂಪೆನಿಯಲ್ಲಿ ನಡೆದ ಕಳವು ಪ್ರಕರಣ, ಮಂಗಳೂರು ನಗರದಲ್ಲಿ ಎರಡು ಮೊಬೈಲ್ ಅಂಗಡಿಯಲ್ಲಿ ನಡೆದ ಕಳವು ಪ್ರಕರಣದ ಬಗ್ಗೆ ಬಾಯಿ ಬಿಟ್ಟಿದ್ದ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚೌಟ ಗ್ಯಾಸ್ ಏಜೆನ್ಸಿ ಕಟ್ಟಡದ ಹಿಂಬಾಗದ ಕಿಟಕಿಯ ವೆಲ್ಡ್ ಮಾಡಿದ ಸರಳನ್ನು ಲಿವರ್ ಬಳಸಿ ಬಾಗಿಸುವ ಮೂಲಕ ಒಳ ನುಗ್ಗಿ ನಗದು ಮತ್ತು ಒಂದು ಮೊಬೈಲ್ ಕಳವು ಮಾಡಿದ್ದ. ಕಳವು ಮಾಡುವಾಗ ಮುಖಕ್ಕೆ ಕಪ್ಪು ಬಟ್ಟೆಯ ಮುಸುಕು ಹಾಕಿಕೊಂಡು, ಎರಡು ಕೈಗಳಿಗೆ ಗ್ಲೌಸ್ ಹಾಕಿಕೊಂಡಿದ್ದು ಒಂದು ಕೈಯಲ್ಲಿ ಚಿಕ್ಕದಾಗಿ ಮಿನುಗುವ ಲೈಟ್ ಮತ್ತು ಇನ್ನೊಂದು ಕೈಯಲ್ಲಿ ಸ್ಕ್ರೂಡ್ರೈವರನ್ನು ಹಿಡಿದುಕೊಂಡು ಕಳ್ಳನು ಓಡಾಡುವ ದ್ರಶ್ಯ ಚಲನವಲನಗಳು ಸಿಸಿ ಕೆಮರಾದಲ್ಲಿ ಆಗ ಸ್ಪಷ್ಟವಾಗಿ ಮೂಡಿತ್ತು.

ಘಟನೆಯ ಸಂದರ್ಭದಲ್ಲಿ ಪೊಲೀಸರು ಕಳವು ಮಾಡಿದವ ವೃತ್ತಿಪರ ಹಾಗೂ ವಾಹನದಲ್ಲಿ ಬಂದು ಕಳವು ನಡೆಸಿದ್ದಾಗಿ ಶಂಕಿಸಿದ್ದರು. ಅದೇ ಪ್ರಕಾರ ಅವನೊಬ್ಬ ವೃತ್ತಿಪರ ಕಳ್ಳನಾಗಿದ್ದು ಏಕಾಂಗಿಯಾಗಿ ಕಳವು ನಡೆಸುತ್ತಿದ್ದ. ಶ್ವಾನವು ಕಳ್ಳನ ಜಾಡು ಹಿಡಿದು ಸುಮಾರು ದೂರಕ್ಕೆ ಹೋಗಿ ಅಂಗನವಾಡಿ ಕಟ್ಟಡದ ಬಳಿ ನಿಂತಿತ್ತು. ತನಿಖೆಯ ಸಂದರ್ಭದಲ್ಲಿ ತಿಳಿದು ಬಂದಂತೆ ಆರೋಪಿಯು ಅಂಗನವಾಡಿ ಕಟ್ಟಡದ ಬಳಿ ತನ್ನ ದ್ವಿಚಕ್ರ ಕೆನೆಟಿಕ್ ನಿಲ್ಲಿಸಿ ನಡೆದುಕೊಂಡು ಕಟ್ಟಡದ ಹಿಂಬದಿಗೆ ಬಂದು ಕಳವು ಮಾಡಿದ್ದ.

ಆರೋಪಿಯಿಂದ ಕಳವು ಮಾಡಿದ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಕಳವು ಮಾಡಿದ ನಗದಲ್ಲಿ ಆತ ಮೂಡಬಿದಿರೆಯಲ್ಲಿ ಕೆಲವರಿಂದ ಪಡೆದ ಕೈಸಾಲವನ್ನು ಸಂದಾಯಿಸಿದ್ದಾಗಿ ಉಪಯೋಗಿಸಿದ್ದಾಗಿ ತನಿಖೆ ಸಂದರ್ಭದಲ್ಲಿ ತಿಳಿದು ಬಂದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಬಂಟ್ವಾಳ ವೃತ್ತ ನಿರೀಕ್ಷಕ ಶರಣ್ಯೆ ಗೌಡ ನೇತೃತ್ವದಲ್ಲಿ ಸಿಬಂದಿಗಳು ತನಿಖೆ ನಡೆಸುತ್ತಿದ್ದಾರೆ.