Recent Posts

Sunday, January 19, 2025
ರಾಜಕೀಯಸುದ್ದಿ

‘ಒಡಿಶಾದ ಮೋದಿಗೂ’ ಸಿಕ್ತು ಮಂತ್ರಿ ಸ್ಥಾನ – ಕಹಳೆ ನ್ಯೂಸ್

ನಿನ್ನೆ ಭಾರತ ದೇಶದ ಪ್ರಧಾನಮಂತ್ರಿ ಆಗಿ ಎರಡನೇ ಬಾರಿಗೆ ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸಿದರು. ಇದೇ ವೇಳೆ ಮೋದಿ ಜೊತೆಗೆ ಹಲವಾರು ಸಂಸದರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ ಸಾವಿರಾರು ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು ಸಮಾರಂಭದಲ್ಲಿ ಭಾಗವಹಿಸಿ ನೂತನ ಮಂತ್ರಿಗಳ ಪ್ರಮಾಣ ವಚನ ಸಮಾರಂಭದಲ್ಲಿ ಸಾಕ್ಷಿಯಾದರು.ದೇಶ ವಿದೇಶಗಳ ಹಲವಾರು ಗಣ್ಯರ ಜೊತೆ ಸಿನಿಮಾ ತಾರೆಯರು , ರಾಜಕೀಯ ನಾಯಕರು ಭಾಗವಹಿಸಿದರು. ಇದರಲ್ಲಿ ವಿಶೇಷವಾಗಿ ಎಲ್ಲರ ಗಮನ ಸೆಳೆದವರು ಎಂದರೆ ಪ್ರತಾಪ್ ಸಾರಂಗಿ.

ಒಡಿಶಾದ ಬಲಾಸೋರ್ ಕ್ಷೇತ್ರದ ಸಂಸದರಾಗಿ ಆಯ್ಕೆಯಾದ ಪ್ರತಾಪ್ ಸಾರಂಗಿ ‘ಒಡಿಶಾ ಮೋದಿ’ ಎಂದೇ ಹೆಸರಾಗಿದ್ದಾರೆ. ಶ್ವೇತ ವರ್ಣದ ಜುಬ್ಬಾ, ಪೈಜಾಮಾ, ಹೆಗಲಲ್ಲೊಂದು ಜೋಳಿಗೆ, ಓಡಾಡುವುದಕ್ಕೊಂದು ಸೈಕಲ್ ಇದು ಇವರ ವಿಶೇಷ. ಸರಳತೆಯನ್ನೇ ಅಳವಡಿಸಿಕೊಂಡ ಇವರು ಬಿಜೆಡಿ ಅಭ್ಯರ್ಥಿ ರಬೀಂದ್ರ ಜೇನಾ ಅವರನ್ನು 12,956 ಮತಗಳಿಂದ ಸೋಲಿಸಿ ಸಂಸದರಾಗಿ ಬಡ ಸಂಸದರ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ. ಕಳೆದ ವರ್ಷ ತಾಯಿಯನ್ನು ಕಳೆದುಕೊಂಡ ಅವರು ತಮ್ಮ ಜೀವನವನ್ನು ಸಂಪೂರ್ಣ ಸಮಾಜದ ಅಭಿವೃದ್ಧಿಗೆ ಮೀಸಲಿಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು