Recent Posts

Monday, January 20, 2025
ಸುದ್ದಿ

ಸಂಗೋಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಅನುಮಾನಾಸ್ಪದ ಗ್ರೆನೇಡ್ ರೀತಿಯ ವಸ್ತು ಪತ್ತೆ – ಕಹಳೆ ನ್ಯೂಸ್

ಬೆಂಗಳೂರು: ನಗರದ ಸಂಗೋಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದ ಫ್ಲಾಟ್ ಫಾರಂ ನಂಬರ್ 1 ರಲ್ಲಿ ಅನುಮಾನಾಸ್ಪದ ವಸ್ತುವನ್ನು ಕಂಡು ಪ್ರಯಾಣಿಕರು ಬೆಚ್ಚಿ ಬಿದ್ದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ಅನುಮಾನಾಸ್ಪದ ವಸ್ತು ಗ್ರೆನೇಡ್ ರೀತಿಯಲ್ಲಿ ಕಂಡು ಬಂದಿದ್ದು, ಪ್ರಯಾಣಿಕನೊಬ್ಬ ಬಾಂಬ್ ಮಾದರಿಯ ವಸ್ತನ್ನು ಕಲ್ಲು ಎಂದು ತಿಳಿದು ರೈಲಿನಿಂದ ಹೊರಗೆ ಎಸೆದಿದ್ದಾನೆ. ಗ್ರೆನೇಡ್ ರೀತಿಯ ವಸ್ತುವಿನ ಬಗ್ಗೆ ತಿಳಿದು ಪ್ರಯಾಣಿಕರು ಹೆದರಿ ಸ್ಥಳದಿಂದ ಓಡಲು ಪ್ರಾರಂಭಿಸಿದರು. ಸ್ಥಳಕ್ಕೆ ರೈಲ್ವೆ ಪೊಲೀಸರು, ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬಂಧಿಗಳು ಸೇರಿ ತೀವ್ರ ತಪಾಸಣೆ ನಡೆಸುತ್ತಿದ್ದಾರೆ. ನಿಲ್ದಾಣದ ಫ್ಲಾಟ್ ಫಾರಂನಲ್ಲಿದ್ದ ಪ್ರಯಾಣಿಕರನ್ನು ಹೊರಗೆ ಕಳುಹಿಸಲಾಗಿದ್ದು, ತಪಾಸಣೆ ನಡೆಸಲಾಗುತ್ತಿದೆ. ಪತ್ತೆಯಾದ ಗ್ರನೇಡ್ ಮಾದರಿಯ ವಸ್ತುವನ್ನು ಬಾಂಬ್ ನಿಷ್ಕ್ರಿಯ ದಳದವರು ವಶಕ್ಕೆ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು