Monday, January 20, 2025
ಸುದ್ದಿ

ಮಗ ಎರಡನೇ ಬಾರಿ ಪ್ರಮಾಣ ವಚನ ಸ್ವೀಕಾರ.. ಚಪ್ಪಾಳೆ ತಟ್ಟಿ ತಾಯಿ ಖುಷಿ..!- ಕಹಳೆ ನ್ಯೂಸ್

ಅಹ್ಮದಾಬಾದ್: ತಮ್ಮ ಮಗ ಭಾರತದ ಪ್ರಧಾನಿಯಾಗಿ ಸತತ ಎರಡನೇ ಬಾರಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದುದನ್ನು ನೋಡಿ 99 ವರ್ಷದ ಹೀರಾಬೆನ್ ಅವರು ಅಹ್ಮದಾಬಾದ್‍ನಲ್ಲಿರುವ ನಿವಾಸದಲ್ಲಿಯೇ ಕುಳಿತುಕೊಂಡು ಟಿವಿಯಲ್ಲಿ ನೋಡಿ, ಚಪ್ಪಾಳೆ ತಟ್ಟಿ ಸಂತಸಪಟ್ಟಿದ್ದಾರೆ. ಸದಾ ತನ್ನ ಮಗನ ಅಭ್ಯುದಯವನ್ನೇ ಬಯಸಿ, ಮಗ ತನ್ನ ಬಳಿ ಬಂದಾಗ ಮನತುಂಬಿ ಹರಸಿ, ಬಾಯಿಗೆ ಸಿಹಿ ಹಾಕಿ ಸಂತಸಪಡುವ ಈ ಮಹಾ ತಾಯಿಗೆ ಇದಕ್ಕಿಂತ ಖುಷಿಯಾಗುವಂಥ ಸಮಯ ಇನ್ನಾವುದಿದೆ? ಕುಳಿತಲ್ಲಿಂದಲೇ ತನ್ನ ಮಗ ದೇಶಕ್ಕೆ ಒಳ್ಳೆಯದನ್ನು ಮಾಡಲಿ ಎಂದು ಹರಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು