Monday, January 20, 2025
ಸುದ್ದಿ

ಇಂದು ತಂಬಾಕು ನಿಷೇಧ ದಿನ – ಕಹಳೆ ನ್ಯೂಸ್

ತಂಬಾಕು ಹಲವು ಶತಮಾನಗಳಿಂದ ಮಾನವನ ಜೊತೆಗಿದೆ. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ತಂಬಾಕನ್ನು ಸೇವನೆ ಮಾಡುವವರು ಇದ್ದಾರೆ. ವೀಳ್ಯ, ಪಾನ್ ಮಸಲಾ, ಸಿಗರೇಟ್, ಹೀಗೆ ನಾನಾ ಬಗೆಯಲ್ಲಿ ತಂಬಾಕನ್ನು ಸೇವಿಸ್ತಾರೆ. ಇದರಿಂದ ಮನುಷ್ಯನಿಗೆ ತೊಂದರೆ ಉಂಟಾಗಿ ಆರೋಗ್ಯ ಹಾಳುಗೆಡುತ್ತೆ ಅಂದರೂ ಅದೆಷ್ಟೋ ಕೋಟ್ಯಾಂತರ ಜನರು ವರ್ಷಕ್ಕೆ ವಿವಿಧ ರೋಗಗಳಿಗೆ ತುತ್ತಾಗಿ ಮರಣವನ್ನು ಅಪ್ಪುತ್ತಿದ್ದಾರೆ.

ಇಂದು ವಿಶ್ವ ತಂಬಾಕು ನಿಷೇಧ ದಿನವಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಈ ದಿನವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ. ಈ ದಿನದಂದು ತಂಬಾಕು ಮತ್ತು ಶ್ವಾಸಕೋಶ ಬಗ್ಗೆ ಅರಿವನ್ನು ಮೂಡಿಸಲಾಗುತ್ತದೆ.
ವಿಶ್ವ ಸಂಸ್ಥೆಯ ಆರೋಗ್ಯ ಸಂಸ್ಥೆ, ರೆಡ್ ಕ್ರಾಸ್ ಹೀಗೆ ನಾನಾ ಸ್ವಯಂ ಸೇವಾ ಸಂಸ್ಥೆಗಳು ಈ ದಿನದಂದು ತಂಬಾಕಿನಿಂದ ಉಂಟಾಗುವ ಆರೋಗ್ಯ ಸಂಬಂಧಿ ಕಾಯಿಲೆಗಳ ಬಗ್ಗೆ ಯುವಕರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಮಾಡುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಂಬಾಕು ಸೇವನೆಯಿಂದ ಜೀವವೇ ಕಳೆದುಕೊಳ್ಳುವ ಬದಲು ತಂಬಾಕನ್ನು ಮರೆತು ಆರೋಗ್ಯಕರ ಜೀವನ ಸಾಗಿಸುವಲ್ಲಿ ಯುವಕರು ಪಣ ತೊಡಬೇಕಾದ ಅನಿವಾರ್ಯತೆ ಬಹಳಷ್ಟಿದೆ. ಈ ದಿನ ಮಾತ್ರ ತಂಬಾಕನ್ನು ದೂರಮಾಡದೆ ಪ್ರತಿದಿನ ತಂಬಾಕನ್ನು ದೂರಮಾಡಿ ಆರೋಗ್ಯಕರ ಜೀವನ ನಿಮ್ಮದಾಗಿಸಿ

ಜಾಹೀರಾತು
ಜಾಹೀರಾತು
ಜಾಹೀರಾತು