ಪುತ್ತೂರು : ಪುತ್ತೂರಿನ ಅಂಬಿಕಾ ಮಹಾವಿದ್ಯಾಲಯ ಇಂದು ಲೋಕಾರ್ಪಣೆಗೊಂಡಿದೆ.
ಶೃಂಗೇರಿ ಶ್ರೀ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯಿಂದ ಸಾರ್ವಜನಿಕ ಗುರುವಂದನೆ ನಡೆಯಿತು.ಗುರುವಂದನೆ ಕಾರ್ಯಕ್ರಮಕ್ಕೆ ಮೊದಲು ಗುರುಗಳು ತರ್ಕ ಶಾಸ್ತ ಪುಸ್ತಕ ಬಿಡುಗಡೆ ಮಾಡಿದರು.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ವಿಜ್ಞಾನ ವಿಭಾಗದಲ್ಲಿ ತತ್ವಶಾಸ್ತ್ರ ಅಳವಡಿಕೆ ಮಾಡಿರುವ ಸಂಸ್ಧೆ ಇದಾಗಿದೆ.ಈ ಕಾರ್ಯಕ್ರಮದಲ್ಲಿ ಪುತ್ತೂರಿನ ಶಾಸಕ ಸಂಜೀವ ಮಠಂದೂರು ಹಾಗು ಮಾಜಿ ಶಾಸಕಿ ಶಕುಂತಲ ಶೆಟ್ಟಿ ಭಾಗಿಯಾಗಿದ್ದರು, ಇನ್ನು ಅನೇಕ ಗಣ್ಯರು ಈ ಸುಸಂದರ್ಭದಲ್ಲಿ ಉಪಸ್ಧಿತರಿದ್ದರು.