Monday, January 20, 2025
ಸುದ್ದಿ

ಸೇಬು ಹಣ್ಣಿನ ತೂಕವಿದ್ದ ಮಗು ಈಗ ಆರೋಗ್ಯಪೂರ್ಣ – ಕಹಳೆ ನ್ಯೂಸ್

ಲಾಸ್ ಏಂಜೆಲೀಸ್: ಅತ್ಯಂತ ಕಡಿಮೆ ತೂಕವಿದ್ದರೂ ಮಗುವೊಂದು ಬದುಕುಳಿದು ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ವಿಭಿನ್ನ ಸನ್ನಿವೇಶವೊಂದು ಲಾಸ್ ಏಂಜೆಲೀಸ್ ನಲ್ಲಿ ನಡೆದಿದೆ. ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಗರ್ಭಿಣಿಯೊಬ್ಬರು ಕೇವಲ 23 ವಾರ ಹಾಗೂ 3 ದಿನ ತುಂಬಿದ್ದ ಮಗುವಿಗೆ ಜನ್ಮ ನೀಡಿದ್ದರು. ಮಗುವಿಗೆ ಸೇಬೀ ಎಂದು ಹೆಸರಿಡಲಾಗಿತ್ತು. ಹುಟ್ಟಿದಾಗ ಕೇವಲ ಒಂದು ಸೇಬು ಹಣ್ಣಿನ ತೂಕ ಅಂದರೆ 245 ಗ್ರಾಂ ತೂಕವಿದ್ದ ಮಗು ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಜನಿಸಿದ 5 ತಿಂಗಳ ಬಳಿಕ ಮಗು ಇದೀಗ 2.5 ಕೆಜಿ ತಲುಪಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು