Monday, January 20, 2025
ಸುದ್ದಿ

ಅಂಗನವಾಡಿಗೆ ಸೇರಿಸಿ ಭೇಷ್ ಎನಿಸಿಕೊಂಡ ಮಧ್ಯಪ್ರದೇಶದ ಜಿಲ್ಲಾಧಿಕಾರಿ – ಕಹಳೆ ನ್ಯೂಸ್

ಭೋಪಾಲ್ : ಆಕರ್ಷಕ ಪ್ಲೇಹೋಮ್‍ಗಳಿಗೆ ಮಕ್ಕಳನ್ನು ಸೇರಿಸುವ ಜನರ ನಡುವೆ ಮಧ್ಯಪ್ರದೇಶದ ಜಿಲ್ಲಾಧಿಕಾರಿಯೊಬ್ಬರು ತಮ್ಮ ಮಗಳನ್ನು ಸರ್ಕಾರಿ ಅಂಗನವಾಡಿಗೆ ದಾಖಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮಧ್ಯಪ್ರದೇಶದ ಕಟ್ನಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಪಂಕಜ್ ಜೈನ್ ತಮ್ಮ ಮಗಳನ್ನು ಯಾವುದೇ ಖಾಸಗಿ ಶಾಲೆಗೆ ಸೇರಿಸದೇ ಸರ್ಕಾರಿ ಅಂಗನವಾಡಿಗೆ ದಾಖಲಿಸಿ ಇತರರಿಗೆ ಮಾದರಿಯಾಗಿದ್ದಾರೆ. ಈ ಪ್ರದೇಶದಲ್ಲಿ ಎಲ್ಲ ಪ್ರೈವೇಟ್ ಪ್ಲೇ ಸ್ಕೂಲ್‍ಗಳಿಗಿಂತ ಅಂಗನವಾಡಿ ಚೆನ್ನಾಗಿದೆ. ಸರ್ಕಾರಿ ಅಧಿಕಾರಿಯಾದವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುವುದರಿಂದ ಅಲ್ಲಿಯ ಕೆಟ್ಟ ಪರಿಸ್ಥಿತಿಗಳು ಸುಧಾರಣೆ ಕಾಣುತ್ತವೆ ಎಂದು ಪಂಕಜ್ ಜೈನ್ ಹೇಳಿದ್ದಾರೆ. ಈ ಕುರಿತು ರಾಜ್ಯಪಾಲ ಆನಂದಿಬೆನ್ ಪಂಕಜ್ ಜೈನ್‍ಗೆ ಪತ್ರ ಬರೆದು ಶುಭಾಶಯ ಕೋರಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು