Monday, January 20, 2025
ಸಿನಿಮಾಸುದ್ದಿ

ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಸ್ಯಾಂಡಲ್ ವುಡ್ ಕ್ರೇಜಿ ಸ್ಟಾರ್ ರವಿಚಂದ್ರನ್

ಸ್ಯಾಂಡಲ್ ವುಡ್ ಕನಸುಗಾರ ಕ್ರೇಜಿ ಸ್ಟಾರ್ ರವಿಚಂದ್ರನ್ ತಮ್ಮ ವಿಭಿನ್ನ ಮ್ಯಾನರಿಸಂ ನಟನೆಯ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಸಂಪಾದಿಸಿರುವ ಇವರು ಕನ್ನಡ ಚಿತ್ರರಂಗದ ರವಿಮಾಮ. ವಿಶೇಷವೆಂದರೆ ನಿನ್ನೇಯಷ್ಟೇ ರವಿಮಾಮನ ಜನ್ಮದಿನವಿತ್ತು. ಆದರೆ ತಮ್ಮ ಏಕೈಕ ಪುತ್ರಿಯ ವಿವಾಹದ ಸಲುವಾಗಿ ನಾನು ಈ ವರ್ಷ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುವುದಿಲ್ಲವೆಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದರು. ಆದರೆ ತಮ್ಮ ಪ್ರೀತಿ ಪಾತ್ರರ ಸಲುವಾಗಿ ಒತ್ತಾಯದ ಮೇರೆಗೆ ನಿನ್ನೆ ತಮ್ಮ ಸ್ನೇಹಿತರು ಹಾಗೂ ಕುಟುಂಬದವರೊಟ್ಟಿಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ

ಹೌದು, ಇತ್ತಿಚೆಗಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ತಕಧಿಮಿತ ರಿಯಾಲಿಟಿ ಶೋ ಮುಕ್ತಾಯಗೊಂಡಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದ ಜಡ್ಸ್ ಆಗಿ ಸ್ಪರ್ಧಿಗಳಿಗೆ ನ್ಯಾಯಯುತವಾದ ತೀರ್ಪನ್ನು ನೀಡುವ ಮೂಲಕ ಈ ಕಾರ್ಯಕ್ರಮ ಬಹಳ ಜನಪ್ರಿಯವಾಗಿತ್ತು. ಅದರಂತೆ ನಿನ್ನೆ ತಕಧಿಮಿತ ತಂಡದವರು ಅಕುಲ್ ಬಾಲಾಜಿ, ದಿವ್ಯ, ಕವಿತಾ ಗೌಡ, ನಮ್ರತಾ ಗೌಡ, ನೇಹಾ ಗೌಡ ಹಾಗೂ ರವಿಚಂದ್ರನ್ ಪುತ್ರರು, ಮಡದಿ, ಮಗಳು ಹಾಗೂ ಅಳಿಯ ಜೊತೆಗೂಡಿ ರವಿಚಂದ್ರನ್ ಹುಟ್ಟುಹಬ್ಬವನ್ನು ಆಚರಣೆಮಾಡಿದ್ದಾರೆ. ಈ ಸಂಭ್ರಮದ ಕ್ಷಣಗಳ ಪೋಟೋಗಳು ಹಾಗೂ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.