ಬೆಂಗಳೂರು : ಲೋಕಸಭಾ ಚುನಾವಣೆ ಬಳಿಕ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯಲ್ಲಿ ಏರಿಕೆಯಾಗುತ್ತಾ ಸಾಗಿದ್ದು, ದೇಶದ ವಿವಿಧ ನಗರಗಳಲ್ಲಿನ ಇಂದಿನ ತೈಲ ದರ ಇಂತಿದೆ.
ದೈನಂದಿನ ತೈಲ ಬೆಲೆ ಬದಲಾವಣೆ ಪ್ರಕ್ರಿಯೆಯಲ್ಲಿ ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್‍ಗೆ 74.14 ರೂ ಇದ್ದು, ಡೀಸೆಲ್ ದರ 68.80 ರೂ. ಇದೆ. ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 71.80 ರೂ. ಮತ್ತು ಡೀಸೆಲ್ ದರ 66.63 ರೂ. ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್‍ಗೆ ರೂ. 3981 ಕ್ಕೆ ತಲುಪಿದ್ದು, ಗಮನಾರ್ಹ ಸಂಗತಿಯಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ ದರ 74.53 ರೂ. ಮತ್ತು ಡೀಸೆಲ್ ದರ 70.44 ರೂ. ಇದೆ. ಕೋಲ್ಕತಾದಲ್ಲಿ ಪೆಟ್ರೋಲ್ ದರ 73.86 ರೂ. ಮತ್ತು ಡೀಸೆಲ್ ದರ 68.39 ರೂ. ಇದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ದರ 77.41 ರೂ. ಮತ್ತು ಡೀಸೆಲ್ ದರ 69.82 ರೂ. ಇದೆ.