Monday, January 20, 2025
ಸಿನಿಮಾಸುದ್ದಿ

ಬಂಟ್ವಾಳದಲ್ಲಿ ಜುಗಾರಿ ಆಡ್ಡೆಗೆ ದಾಳಿ : ಆರೋಪಿಗಳು ಅಂದರ್ – ಕಹಳೆ ನ್ಯೂಸ್

ಬಂಟ್ವಾಳ: ಜುಗಾರಿ ಆಡ್ಡೆಗೆ ದಾಳಿ ನಡೆಸಿದ ಆಟದಲ್ಲಿ ನಿರತರಾಗಿದ್ದ 15 ಜನರನ್ನು ಬಂಧಿಸಿ ಆಟಕ್ಕೆ ಬಳಸಲಾಗಿದ್ದ ನಗದು ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಬಂಟ್ವಾಳ ಗ್ರಾಮಾಂತರ ಪೋಲೀಸರು ಯಶಸ್ವಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತುಂಬೆ ಗ್ರಾಮದ ನೇತ್ರಾವತಿ ನದಿಯ ಬದಿಯಲ್ಲಿ ಆಡುತ್ತಿದ್ಧ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಪೋಲೀಸರು ಆಟದಲ್ಲಿ ನಿರತರಾಗಿದ್ದ.ಅಮಿತ ಶೆಟ್ಟಿ, .ರಾಮಚಂದ್ರ,ಸಂತೋಷ್ ಕುಮಾರ್,ಧೀರಜ್,ಸುಜಯ್,.ನಜೀರ್,.ಮೊಹಮದ್ ಮುಸ್ತಾಫಾ,.ಕಿಶೋರ್,ಮಹಮದ್ ಷರೀಫ್,.ನಿತ್ಯಾನಂದ,.ರಮೇಶ್, ನಾಗೇಶ್, .ರೋಷನ್ ವೇಗಸ್,ಹೇಮಚಂದ್ರ,ಮತ್ತು .ಚೇತನ್, ಎಂಬುವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದಾಳಿಯಲ್ಲಿ ಒಟ್ಟು 38000/-ರೂಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಟಾರ್ಪಲ್, ಚಾರ್ಜ್ ಅಬಲೆ ಬ್ಯಾಟರಿ ಮತ್ತು ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಕುರಿತಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಆ. ಕ್ರ.58/19 ಕಲಂ 87 ಕರ್ನಾಟಕ ಪೊಲೀಸ್ ಕಾಯ್ದೆ 1963 ರಂತೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಇನ್ನು ಈ ಪ್ರಕರಣದಲ್ಲಿ ಬಂಟ್ವಾಳ ಎ.ಎಸ್.ಪಿ. ಸೈದುಲು ಅದಾವತ್ ಬಂಟ್ವಾಳ ವೃತ್ತ ನಿರೀಕ್ಷಕ ಶರಣಗೌಡರವರ ಮಾರ್ಗದರ್ಶನದಲ್ಲಿ ಬಂಟ್ವಾಳ ಗ್ರಾಮಾಂತರ ಎಸ್.ಐ. ಪ್ರಸನ್ನ, ಪ್ರೋಬೆಶನರಿ ಪಿ.ಎಸ್.ಐ. ವಿನೋದ್, ಎಚ್.ಸಿ. ಗಳಾದ ಜನಾರ್ದನ, ಸುರೇಶ್, ಪಿ.ಸಿ.ಗಳಾದ ನಜೀರ್, ಪುನೀತ್, ಬಸವರಾಜ್, ಆದರ್ಶ, ವಿವೇಕ್, ಉಮೇಶ್, ಸುರೇಶ್, ಎಚ್.ಜಿ.ಅಶೋಕ,ರವರು ದಾಳಿಯಲ್ಲಿ ಭಾಗವಹಿಸುತ್ತಾರೆ.