ಕೇಂದ್ರ ಸರ್ಕಾರದ ಸಂಪುಟಕ್ಕೆ ಕೇಂದ್ರ ಸಚಿವರಾಗಿ ಸೇರ್ಪಡೆಗೊಂಡವರಿಗೆ ಅಭಿನಂದಿಸಿದ ಶ್ರೀ ನಳಿನ್ ಕುಮಾರ್ ಕಟೀಲ್ – ಕಹಳೆ ನ್ಯೂಸ್
2ನೇ ಬಾರಿಗೆ ದೇಶದ ಪ್ರಧಾನಿಯಾಗಿ ನರೇಂದ್ರ ದಾಮೋದರ್ ದಾಸ್ ಮೋದಿ ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದರು. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ನರೇಂದ್ರ ಮೋದಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಧಾನಿಯಾಗಿ ಮೋದಿ, ಈಶ್ವರನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಇನ್ನು, ಮೋದಿ ಮಂತ್ರಿ ಮಂಡಲದಲ್ಲಿ ಕರ್ನಾಟಕದ 4 ಸಂಸದರೂ ಸೇರಿದಂತೆ ಒಟ್ಟು 44 ಸಂಸದರು ಪ್ರಮಾಣ ವಚನ ಸ್ವೀಕರಿಸಿದ್ರು.
ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜೀ ನೇತೃತ್ವದ ಕೇಂದ್ರ ಸರ್ಕಾರದ ಸಂಪುಟಕ್ಕೆ ಕೇಂದ್ರ ಸಚಿವರಾಗಿ ಸೇರ್ಪಡೆಗೊಂಡಿರುವ ಶ್ರೀ ಡಿ.ವಿ ಸದಾನಂದ ಗೌಡ, ಶ್ರೀ ಪ್ರಹ್ಲಾದ್ ಜೋಷಿ ಹಾಗೂ ಶ್ರೀ ಸುರೇಶ್ ಅಂಗಡಿ, ಶ್ರೀ ವಿ. ಮುರಳೀಧರನ್ ಅವರನ್ನು ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರು ಭೇಟಿ ಮಾಡಿ ಅಭಿನಂದಿಸಿದರು.