ನವದೆಹಲಿ : ಸಂಸದ ಶ್ರೀರಾಮುಲು ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ನಡೆದಿದೆ.
ಈ ಘಟನೆ ಇಂದು ಬೆಳಗ್ಗಿನ ಜಾವ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ದೆಹಲಿಯ ಪಿರೋಝ್ ಷಾ ರಸ್ತೆಯಲ್ಲಿರುವ ನಿವಾಸದ ಬೆಡ್ ರೂಂ ಧಗಧಗ ಹೊತ್ತಿ ಉರಿದಿದೆ. ಸದ್ಯ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ರೂಂನಲ್ಲಿದ್ದ ಬೆಡ್, ಸೋಪಾ ಸುಟ್ಟು ಕರಕಲಾಗಿದೆ.
ಸಂಸದರು ಮಲಗಿದ್ದ ರೂಂ ನಲ್ಲೇ ಮೊದಲು ಬೆಂಕಿ ಹೊತ್ತಿಕೊಂಡಿದ್ದು, ನಂತ್ರ ಕರ್ಟನ್ ಮೂಲಕ ಸೋಫಾಗೆ ಹೊತ್ತಿಕೊಂಡು ಬೃಹತ್ ಸ್ವರೂಪ ಪಡೆದ ಅಗ್ನಿ ಜ್ವಾಲೆಗೆ ಶ್ರೀರಾಮುಲು ಬೆಡ್, ಸೋಫಾ ಸುಟ್ಟು ಕರಕಲಾಗಿದೆ. ಘಟನೆಯಿಂದ ಸಂಸದರ ಕೊಠಡಿ ಹೊರತು ಪಡಿಸಿ ಉಳಿದ ಭಾಗ ಸೇಫ್ ಆಗಿದೆ ಎಂದು ತಿಳಿದುಬಂದಿದೆ.
ಅಗ್ನಿ ಅವಘಡ ಸಂಭವಿಸಿದ ಮಾಹಿತಿ ತಿಳಿದ ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಸಂಸದ ಶ್ರೀರಾಮುಲು ಅವರು ಕಹಳೆ ನ್ಯೂಸ್ ಜೊತೆ ಮಾತನಾಡಿ, ಇಂದು ಬೆಳಗ್ಗೆ ಸುಮಾರು 5.30ಗೆ ಅಗ್ನಿ ಅವಘಡ ಸಂಭವಿಸಿದೆ. ನೋಡನೋಡುತ್ತಿದ್ದಂತೆಯೇ ಸಣ್ಣದಾಗಿ ಕಾಣಿಸಿಕೊಂಡ ಬೆಂಕಿಯ ಜ್ವಾಲೆ ಇಡೀ ರೂಮನ್ನೇ ಕ್ಷಣಾರ್ಧದಲ್ಲೇ ಆವರಿಸಿತ್ತು. ಹೀಗಾಗಿ ನಾವು ಮನೆಯಿಂದ ಹೊರಬರದಲು ಸಾಕಷ್ಟು ಕಷ್ಟ ಅನುಭವಿಸಬೇಕಾಯಿತು. ಘಟನೆ ನಡೆದ ವೇಳೆ 6, 7 ಮಂದಿ ಮನೆಯೊಳಗಡೆ ಇದ್ವಿ. ಇನ್ನು ಬಳ್ಳಾರಿಯಿಂದ ಕೆಲವು ಹುಡುಗರು ಕೂಡ ಇಲ್ಲಿ ಬಂದಿದ್ದರು. ಅವರಿಗೂ ಕೂಡ ಸಣ್ಣಪುಟ್ಟ ಗಾಯಗಳಾಗಿವೆ. ಒಟ್ಟಿನಲ್ಲಿ ಹಾಕ್ಕೊಂಡ ಬಟ್ಟೆ ಬಿಟ್ರೆ ಬೇರೆ ಇಲ್ಲವೂ ಬೆಂಕಿಗಾಹುತಿಯಾಗಿವೆ ಅಂತ ಅವರು ತಿಳಿಸಿದ್ರು.