Tuesday, January 21, 2025
ಸುದ್ದಿ

ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಕರಂಬೀರ್ ಸಿಂಗ್ ಅಧಿಕಾರ ಸ್ವೀಕಾರ – ಕಹಳೆ ನ್ಯೂಸ್

ನವದೆಹಲಿ: ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಕರಂಬೀರ್ ಸಿಂಗ್ ಅವರು ಇಂದು ಅಧಿಕಾರ ಸ್ವೀಕರಿಸಿದರು. ದೆಹಲಿಯಲ್ಲಿರುವ ನೌಕಾ ಪಡೆಯ ಕೇಂದ್ರ ಕಚೇರಿಯಲ್ಲಿ ವೈಸ್ ಚೀಫ್ ಆಗಿದ್ದ 39ರ ಹರೆಯದ ಕರಂಬೀರ್ ಅವರಿಗೆ ಅಡ್ಮಿರಲ್ ಸುನಿಲ್ ಲಂಬಾ ಅವರು ಅಧಿಕಾರ ಹಸ್ತಾಂತರಿಸಿದರು.

ನಾನು ನೌಕಾಪಡೆಯ 24ನೇ ಮುಖ್ಯಸ್ಥನಾಗಿ ಅಧಿಕಾರ ಸ್ವೀಕರಿಸುತ್ತಿರುವುದು ಬಹುದೊಡ್ಡ ಗೌರವ. ಹಿಂದಿನ ಅಧಿಕಾರಿಗಳು ನೌಕಾಪಡೆಯನ್ನು ತಮ್ಮ ಪರಿಶ್ರಮದಿಂದ ಭದ್ರವಾಗಿಸಿದ್ದಾರೆ ಮತ್ತು ಹೊಸ ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ ಎಂದು ಅವರು ಹೇಳಿದ್ದಾರೆ. ಪಂಜಾಬ್ ನವರಾಗಿರುವ ಕರಂಬೀರ್ ಅವರು ವಾಯು ಪಡೆಯ ಅಧಿಕಾರಿಯೊಬ್ಬರ ಮಗನಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು