Tuesday, January 21, 2025
ಸುದ್ದಿ

ಅರುಣಾಚಲ ಬಿಜೆಪಿ ಸಂಸದನ ಮನೆ ಮುಂದೆ ದುಷ್ಕರ್ಮಿಗಳ ಅಟ್ಟಹಾಸ – ಕಹಳೆ ನ್ಯೂಸ್

ಇಟಾನಗರ: ಅರುಣಾಚಲ ಬಿಜೆಪಿ ಸಂಸದ ಮತ್ತು ರಾಜ್ಯಾಧ್ಯಕ್ಷ ತಾಪಿರ್ ಗಾವ್ರ ಮನೆಯ ಮುಂದೆ ದುಷ್ಕರ್ಮಿಗಳು ಕಾರೊಂದನ್ನು ಸುಟ್ಟು ಹಾಕಿ, ಅಲ್ಲೇ ಇದ್ದ ಸಾಕು ನಾಯಿಯನ್ನೂ ನಿಷ್ಕರುಣೆಯಿಂದ ಸಾಯಿಸಿರುವ ಮನಕಲುಕುವ ಘಟನೆ ಶುಕ್ರವಾರ ಬೆಳಗಿನ ಜಾವ ಇಟಾನಗರದಲ್ಲಿ ಸಂಭವಿಸಿದೆ

.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಷಯ ತಿಳಿದ ಇಟಾನಗರ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದೆ. ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ತಾಪಿರ್ ಗಾವ್, ಘಟನೆಯ ಬಗ್ಗೆ ಅರುಣಾಚಲ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದಿರುವುದಾಗಿ ಹೇಳಿದ್ದಾರೆ. ಈಗಾಗಲೇ ಘಟನೆಯ ಬಗ್ಗೆ ಎಫ್‍ಐಆರ್ ದಾಖಲಿಸಲಾಗಿದ್ದು, ಮನೆಯ ಸಿಸಿ ಟಿವಿ ದೃಶ್ಯಾವಳಿಯನ್ನು ತನಿಖೆಗೆ ಒಳಪಡಿಸಲು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು