Tuesday, January 21, 2025
ಸುದ್ದಿ

‘ಶಿವಾಜಿ ಸೂರತ್ಕಲ್’ ಚಿತ್ರಕ್ಕೆ ಎಂಟ್ರಿಕೊಟ್ಟ ರೋಹಿತ್ ಭಾನುಪ್ರಕಾಶ್ – ಕಹಳೆ ನ್ಯೂಸ್

ರಮೇಶ್ ಅರವಿಂದ್ ರವರ ಬಹುನಿರೀಕ್ಷಿತ ಚಿತ್ರ ‘ಶಿವಾಜಿ ಸೂರತ್ಕಲ್’. ಟೈಟಲ್ ಮೂಲಕವೇ ಸಕ್ಕತ್ ಸೌಂಡ್ ಮಾಡುತ್ತಿರುವ ಈ ಸಿನಿಮಾದಲ್ಲಿನ ಮತ್ತೊಬ್ಬ ನಟನ ಪಾತ್ರ ಬಹಿರಂಗವಾಗಿದೆ. ಹೌದು, ಈಗಾಗಲೇ ರಮೇಶ್ ಅರವಿಂದ್ ಅವರ ಪಾತ್ರವೇನು..?, ಅವರ ಲುಕ್ ಹೇಗಿರಲಿದೆ ಎಂಬುದು ಬಹಿರಂಗವಾಗಿತ್ತು. ಇದೀಗ ಈ ಚಿತ್ರಕ್ಕೆ ಹೊಸ ಪಾತ್ರಧಾರಿ ರೋಹಿತ್ ಭಾನುಪ್ರಕಾಶ್ ಎಂಟ್ರಿಕೊಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪೈಲೆಟ್ ಆದ ರೋಹಿತ್
ಹೌದು, ಈ ಸಿನಿಮಾದಲ್ಲಿ ರೋಹಿತ್ ಭಾನುಪ್ರಕಾಶ್ ಪೈಲೆಟ್ ಆಗಿ ನಟಿಸಲಿದ್ದಾರೆ. ಪೈಲೆಟ್ ಆದವರು ಮುಂದೆ ರೆಸ್ಟೋರೆಂಟ್ ನೋಡಿಕೊಳ್ಳಲು ತಮ್ಮ ಕೆಲಸ ಬಿಟ್ಟು ಬರುತ್ತಾರೆ. ಹೀಗೆ ಕಥೆ ಸಾಗುತ್ತದೆ. ಸದ್ಯ ಲವರ್ ಬಾಯ್ ಆಗಿ ‘ಫೇಸ್ ಟು ಫೇಸ್’ ನಲ್ಲಿ ಕಾಣಿಸಿಕೊಂಡಿದ್ದ ಈ ನಟ ಇದೀಗ ಪೈಲೆಟ್ ಆಗುತ್ತಿರುವುದು ಖುಷಿಯ ಸಂಗತಿ. ಪತ್ತೆದಾರಿ ಕಥೆಯ ಸಿನಿಮಾ ಇದಾಗಿದ್ದು, ಆಕಾಶ್ ಶ್ರೀವತ್ಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಸಿನಿಮಾ ಶೂಟಿಂಗ್ ಭರದಿಂದ ಸಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು